ಲಸಿಕೆ ಹಗರಣ ಆರೋಪ: ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ

Update: 2021-05-29 16:39 GMT

ಬೆಂಗಳೂರು, ಮೇ 29: `ಕೋವಿಡ್ ಲಸಿಕೆ ಹಗರಣದಲ್ಲಿ ತೊಡಗಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಅವರನ್ನು ಕೂಡಲೇ ಬಂಧಿಸಿ, ಉನ್ನತ ತನಿಖೆಗೆ ಒಳಪಡಿಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಜನರ ಸಾವಿನ ನಡುವೆ ಬಿಜೆಪಿ ಕೋವಿಡ್‍ನಲ್ಲಿ ನಿರಂತರವಾಗಿ ಹಗರಣ ನಡೆಸಿಕೊಂಡು ಬರುತ್ತಿದೆ, ಇದು ಕೊನೆಯಾಗಬೇಕು, ಬಡವರ ಕೋವಿಡ್-19 ಲಸಿಕೆ ಕಿತ್ತುಕೊಂಡವರಿಗೆ ಶಿಕ್ಷೆ ಅತ್ಯಗತ್ಯ' ಎಂದು ಇದೇ ವೇಳೆ ಪ್ರತಿಪಾದಿಸಿದ್ದಾರೆ.

4 ಕೋಟಿ ಲಸಿಕೆಗಳು ನಾಪತ್ತೆಯಾದ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಅವರು ಸರಕಾರದ ಉಚಿತ ಹಂಚಿಕೆಯ ಬಡವರ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿಕೊಂಡು ಕಮಿಷನ್ ಪಡೆಯುತ್ತಿರುವ 'ಮಹಾ ಹಗರಣ' ಬೆಳಕಿಗೆ ಬಂದಿದೆ. ಅವರಿಬ್ಬರನ್ನೂ ಚುನಾಯಿತ ಸ್ಥಾನಗಳಿಂದ ವಜಾಗೊಳಿಸಬೇಕು' ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News