ಚಾಮರಾಜನಗರ: ಕೊರೋನ ಹರಡುವ ಭೀತಿಯಿಂದ ದಂಪತಿ, ಇಬ್ಬರು ಪುತ್ರಿಯರು ಆತ್ಮಹತ್ಯೆ

Update: 2021-06-02 17:15 GMT

ಚಾಮರಾಜನಗರ, ಜೂ.2: ಕೊರೋನ ಸೋಂಕಿನಿಂದ ಗುಣಮುಖರಾಗಿದ್ದ ವ್ಯಕ್ತಿ, ಮತ್ತೇ ಕುಟುಂಬಕ್ಕೆ ಸೋಂಕು ತಗುಲುವ ಭೀತಿಯಿಂದ ಇಡೀ ಕುಟುಂಬವೇ ನೇಣಿಗೆ ಶರಣಾದ ಘಟನೆ ಚಾಮರಾಜನಗರ ತಾಲ್ಲೂಕಿನ ಮಸಣಾಪುರ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಗ್ರಾಮ ನಿವಾಸಿ ಮಹದೇವಪ್ಪ (46) ಎಂಬವರಿಗೆ 20 ದಿನಗಳ ಹಿಂದೆ ಕೊರೋನ ಸೋಂಕು ದೃಢವಾಗಿದ್ದು, ಅವರು ಇದೀಗ ಗುಣಮುಖರಾಗಿದ್ದರು. ಮತ್ತೇ ಕುಟುಂಬದ ಸದಸ್ಯರಿಗೆ ಕೊರೋನ ಬರುವ ಭೀತಿಯಲ್ಲಿ ಮಂಗಳವಾರ ರಾತ್ರಿ ಮನೆಯಲ್ಲಿ ಪತ್ನಿ ಮಂಗಳಮ್ಮ (36) ಪುತ್ರಿಯರಾದ ಜ್ಯೋತಿ (14) ಹಾಗೂ ಗೀತಾ (12) ಎಂಬವವರೊಂದಿಗೆ ನೇಣು ಬಿಗಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಂದು ಕಡೆ ಮಹದೇವಪ್ಪ ರವರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಮಂಗಳವಾರ ಹೊಂಗನೂರು ಬ್ಯಾಂಕ್ ನಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಪಡೆದುಕೊಂಡು, ತಾನು ಹಣ ಕೊಡಬೇಕಾದವರಿಗೆ ಕೊಟ್ಟಿದ್ದರು ಎನ್ನಲಾಗಿದೆ. ಕೋರೊನ ಸೋಂಕಿನಿಂದ ಮಾನಸಿಕವಾಗಿ ಬಳಲಿದ್ದ ಮಹದೇವಪ್ಪ ಇಡೀ ಕುಟುಂಬವನ್ನು ಸೋಂಕಿನಿಂದ ರಕ್ಷಿಸುವ ವಿಫಲನಾಗುವೆ ಎಂಬ ಭೀತಿಯಿಂದ ಮನೆಯಲ್ಲಿ ಎಲ್ಲರಿಗೂ ನೇಣು ಹಾಕಿ ತಾನೂ ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ರಾಮಸಮುದ್ರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆನಂದ್ ಭೇಟಿ ನೀಡಿದರು. 

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News