''ಪ್ರಜೆಗಳನ್ನು ಕಾಪಾಡುವ ಬದಲು, ಅವರನ್ನು ಸುಡುವ ಚಿತಾಗಾರಕ್ಕೇ ಪೂಜೆ ಮಾಡುತ್ತಿದ್ದಾರೆ''

Update: 2021-06-02 11:50 GMT

ಹುಬ್ಬಳ್ಳಿ, ಜೂ.2: ಇತ್ತೀಚೆಗೆ ನಗರದ ವಿದ್ಯಾನಗರ ಸ್ಮಶಾನದಲ್ಲಿ ಕೆನರಾ ಬ್ಯಾಂಕ್‌ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ, ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸಚಿವ ಜಗದೀಶ್ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲಾಗುತ್ತದೆ. 11 ಲಕ್ಷ ರೂ. ವೆಚ್ಚದ ಫ್ರೀಜರ್ ಬಾಕ್ಸ್‌ಗಳನ್ನು ಒದಗಿಸಲಿದ್ದು, ಆ. 31ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮಂಟೂರಿನ ಸ್ಮಶಾನದಲ್ಲೂ ಸ್ಮಾರ್ಟ್ ಸಿಟಿ ಅನುದಾನದಡಿ 2.60‌ ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ.

ಆದರೆ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಕೇಂದ್ರ ಸಚಿವ ಹಾಗೂ ರಾಜ್ಯ ಸಚಿವರ ವಿರುದ್ಧ ಈಗ ಟೀಕೆಗಳ ವ್ಯಕ್ತವಾಗುತ್ತಿವೆ. 

''ಎಂಥ ವಿಪರ್ಯಾಸ ನಮ್ಮ ದೇಶದ, ರಾಜ್ಯದ ಪರಿಸ್ಥಿತಿ. ನೀರಾವರಿ ಯೋಜನೆಗೆ ಪೂಜೆ ಮಾಡೋದು ನೋಡಿದ್ದೇನೆ. ಬಡ ಮಕ್ಕಳ ಶಾಲೆ ಕಟ್ಟಡ ಪೂಜೆ ನೋಡಿದ್ದೇನೆ. ಆಶ್ರಯ ಯೋಜನೆ ಭೂಮಿಗೆ ಪೂಜೆ ಮಾಡೋದು ನೋಡಿದ್ದೇನೆ. ಪ್ರಜೆಗಳಿಂದ ಆಯ್ಕೆ ಹಾಗಿ, ಪ್ರಜೆಗಳ ಯೋಗ ಕ್ಷೇಮ ಕಾಪಾಡುವ ಮಂತ್ರಿಗಳು ಇವತ್ತು ಪ್ರಜೆಗಳನ್ನು ಕಾಪಾಡುವ ಬದಲು, ಪ್ರಜೆಗಳನ್ನು ಸುಡುವ ಚಿತಾಗಾರಕ್ಕೇ ಪೂಜೆ ಮಾಡುತ್ತಿದ್ದಾರೆ'' ಎಂದು ಸರ್ವೇಶ್ ಗೌಡ ಎಂಬವರು ಆಕ್ರೋಶ ವ್ಯಕಪಡಿಸಿದ್ದಾರೆ. 

ಶಾಲಾ ಕಾಲೇಜು, ಧರ್ಮಾಸ್ಪತ್ರೆಗಳು, ಗೋಶಾಲೆಗಳು, ಮಠ-ಮಂದಿರಗಳು, ಪ್ರಾರ್ಥನಾ ಮಂದಿರ, ಯೋಗಾ ಮಂದಿರ, ಪ್ರವಾಸೋದ್ಯಮ ಕಟ್ಟಡಗಳ ನಿರ್ಮಾಣ ಮಾಡಬೇಕಾದವರು ಈ ಕಿತ್ತೋದ ರಾಜಕೀಯದಿಂದ ಸ್ಮಶಾನಗಳ ಭೂಮಿ ಪೂಜೆ ಮಾಡ್ತಿದಾರೆ'' ಎಂದು ಶಂಕರ್ ಪುರೋಹಿತ್ ಎಂಬವರು ಪೋಸ್ಟ್ ಮಾಡಿದ್ದಾರೆ.

''ಇದು ಕರ್ನಾಟಕಕ್ಕೆ ಅಚ್ಛೇದಿನ್ ಬರುವ ಮುನ್ಸೂಚನೆ ಇರಬಹುದೇ ಅಥವಾ ಅವರ ಚಿತೆಗೆ ಅವರೇ ಜಾಗ ಗೊತ್ತು ಮಾಡಿಕೊಂಡಿರಬಹುದೇ ? ಇದರಲ್ಲೇ ಅರ್ಥ ಮಾಡಿಕೊಳ್ಳಬೇಕು ಸಾಮಾನ್ಯ ಜನರನ್ನು ಉಳಿಸಲು ಇವರೆಲ್ಲ ಬರಲೇ ಇಲ್ಲ. ಆದರೆ ವಿದ್ಯುತ್ ಚಿತಾಗಾರ ಮಾಡಲು ಓಡೋಡಿ ಬಂದರು. ಯಾಕಂದ್ರೆ ಇದರಲ್ಲಿ ಆದರೂ ಒಂದು ನಾಲ್ಕು ಕಾಸು ಮಾಡಿಕೊಳ್ಳೋಣ ಅಂತ'' ಎಂದು ರವಿ ಕುಮಾರ್ ಎಂಬವರು ಕಮೆಂಟ್ ಮಾಡಿದ್ದಾರೆ.

''ಇನ್ನು ಈ ಕಣ್ಣಲ್ಲಿ ಏನೇನ್ ನೋಡ್ಬೇಕು ದೇವರೇ. ಚಿತಾಗಾರ ನಿರ್ಮಾಣಕ್ಕೆ ಜಗದೀಶ್ ಶೆಟ್ಟರ್ ಭೂಮಿ ಪೂಜೆ'' ಎಂದು ಕೃಷ್ಣ ಕುಮಾರ್ ಎಂಬವರು ಪೋಸ್ಟ್ ಮಾಡಿದ್ದಾರೆ.

ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಸಾಲು ಸಾಲು ಹೆಣಗಳು ಬೀಳುತ್ತಿವೆ. ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆಂಬ ದೂರಿದೆ. ಅದನ್ನು ಸರಿಪಡಿಸದೇ ಸ್ಮಶಾನ ಮಾಡಲಿಕ್ಕೆ ಹೊರಟಿರುವುದು ದುರದೃಷ್ಟಕರ'' ಎಂದು ಮಂಜುನಾಥ್ ವೆರ್ನೇಕರ್ ಎಂಬವರು ಟೀಕಿಸಿದ್ದಾರೆ.

ಜೀವ ಅಂತೂ ನಮ್ಮಿಂದ ಕಾಪಾಡಲು ಆಗುತ್ತಿಲ್ಲ, ಕೊನೆಯದಾಗಿ ನೆಮ್ಮದಿಯಿಂದ ಸ್ವರ್ಗ ಸೇರಿ ಎಂದು ಸ್ಮಶಾನ ಪೂಜೆ'' ಎಂದು ಧನಂಜಯ ಗೌಡ ಎಂಬವರು ಕಮೆಂಟ್ ಮಾಡಿದ್ದಾರೆ.

ಪ್ರಜೆಗಳೇ ಇವರ ಆದ್ಯತೆ ಏನೆಂಬುದು ಈಗಲಾದರೂ ಅರ್ಥ ಮಾಡಿಕೊಳ್ಳಿ. ಜನರನ್ನು ಬದುಕಿಸಲು ಒಂದೊಳ್ಳೆಯ ಆಸ್ಪತ್ರೆ ನಿರ್ಮಿಸದಿದ್ದರೂ ಸ್ಮಶಾನಗಳನ್ನು ನಿರ್ಮಿಸುವ ಆತುರ ಎಷ್ಟಿದೆ ನೋಡಿ ಎಂದು ಸೆಯ್ಯದ್ ನಿಝಾಮುದ್ದೀನ್ ಎಂಬವರು ಕಮೆಂಟ್ ಮಾಡಿದ್ದಾರೆ.

ಜನ ಬದುಕಲು ಆಸ್ಪತ್ರೆ ಕಟ್ಟಿಸಿ, ಅದು ಬಿಟ್ಟು ಚಿತಾಗಾರ ಕಟ್ಟಲು ಹೊರಟಿದ್ದಾರೆ. ಏನು ಹೇಳಬೇಕು ಇಂಥ ಜನ (ದನ) ಪ್ರತಿನಿಧಿಗಳಿಗೆ ಎಂದು ಪರಮೇಶ್ ಮದ್ದೂರು ಎಂಬವರು ಕಿಡಿಕಾರಿದ್ದಾರೆ. ಜನ ಬದುಕಲು ಏನಾದರೂ ಮಾಡಿ ಅಂದ್ರೇ, ಜನ ಸತ್ತ ಮೇಲೆ ಏನು ಮಾಡಬೇಕೋ, ಅದಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಶರತ್ ಎಂಬವರು ಆಕ್ರೋಶ ವ್ಯಕಪಡಿಸಿದ್ದಾರೆ.

ಪ್ರಾಣ ಉಳಿಸುವ ಆಸ್ಪತ್ರೆಗಳು ನಿರ್ಮಾಣ ಮಾಡಲಿಲ್ಲ. ಆದರೆ ಸತ್ತ ಶವಗಳನ್ನು ಮಣ್ಣು ಮಾಡಲು ಚಿತಾಗಾರಗಳನ್ನು ಉದ್ಘಾಟನಾ ಮಾಡೋದರಲ್ಲಿ ಬ್ಯೂಸಿ. ಏಳು ವರ್ಷದ ಸಾಧನೆ ಎಂದು ವಿನೋದ್ ಕುಮಾರ್ ಅಂಗಡಿ ಎಂಬವರು ಲೇವಡಿ ಮಾಡಿದ್ದಾರೆ.

''ಬಿಜೆಪಿ ಸರ್ಕಾರ ಈ ಸಾಧನೆಗೆ - ಕೋಟಿ ಕೋಟಿ ಧನ್ಯವಾದಗಳು. ಒಳ್ಳೆಯ ಒಳ್ಳೆಯ ಶಾಲೆ - ಕಾಲೇಜು ಕಟ್ಟಿ ಉದ್ಘಾಟನೆ ಮಾಡೋದು ನೋಡಿದ್ದೆ. ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ್ದು ಗೊತ್ತಿತ್ತು. ರೈತರ ಜೀವನಾಡಿ ಜಲಾಶಯಗಳ ನಿರ್ಮಿಸಿ ಹಸಿರು ಕ್ರಾಂತಿ ಮಾಡಿದ ಇತಿಹಾಸ ಓದಿದ್ದೆವು. ನಮ್ಮ ಅದೃಷ್ಟ ನೋಡಿ ಹೇಗಿದೆ ಈಗ ಸ್ಮಶಾನ ಉದ್ಘಾಟನೆ ನೋಡೋದು ಬಂದಿದೆ. ಅಚ್ಛೇದಿನ್ ಅಂದರೆ ಇದೇ ಅಲ್ವಾ ? ಇವರ ಯೋಗ್ಯತೆಗೆ ಬೆಂಕಿ ಹಾಕ'' ಎಂದು ನಂದಪ್ಪ ವರಿ ಎಂಬವರು ಟೀಕಿಸಿದ್ದಾರೆ.

ನೋಡಿ ಜನಗಳೇ. ದೇಶದ ಜನಗಳಿಗೆ ಬಂದಿದೆಯೋ ಇಲ್ವೋ, ಕರ್ನಾಟಕದ ಜನತೆಗೆ ಅಚ್ಛೇದಿನ್ ಬಂದೇ ಬಿಡ್ತು. ಇವರಿಗೆ ಅಧಿಕಾರ ಕೊಟ್ಟರೆ ಸುಡೋದಕ್ಕೆ ಚಿತಾಗಾರ ನಿರ್ಮಾಣ ಮಾಡುತ್ತಾರೆ ನೋಡಿ. ಹೊಡೀರಿ ಚಪ್ಪಾಳೆ ಎಂದು ಕುಮಾರ್ ನಾಯ್ಕ್ ಎಂಬವರು ಕಮೆಂಟ್ ಮಾಡಿದ್ದಾರೆ.

Full View Full View Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News