ಕೇರಳ ಪ್ರವೇಶಿಸಿದ ನೈಋತ್ಯ ಮುಂಗಾರು

Update: 2021-06-03 18:32 GMT

ಕೇರಳ, ಜೂ.3: ನೈಋತ್ಯ ಮುಂಗಾರು ನಿಗದಿತ ದಿನಕ್ಕಿಂತ 2 ದಿನ ವಿಳಂಬವಾಗಿ ಗುರುವಾರ ಕೇರಳ ತೀರ ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ನೈಋತ್ಯ ಮುಂಗಾರು ಮಳೆ ದಕ್ಷಿಣ ಕೇರಳ, ದಕ್ಷಿಣ ಅರಬ್ಬೀ ಸಮುದ್ರ, ಲಕ್ಷದ್ವೀಪ ಮತ್ತು ತಮಿಳುನಾಡಿನ ದಕ್ಷಿಣದತ್ತ ಮುಂದುವರಿದಿದೆ. ಮುಂದಿನ 2 ದಿನದಲ್ಲಿ ತಮಿಳುನಾಡಿನ ಇನ್ನೂ ಕೆಲವು ಪ್ರದೇಶಗಳು, ಪುದುಚೇರಿ, ಕರಾವಳಿ ಕರ್ನಾಟಕ ಮತ್ತು ರಾಯಲಸೀಮಾದತ್ತ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ. ಜೂನ್ 5ರವರೆಗೆ ಕೇರಳ, ಮಾಹೆ ಮತ್ತು ಲಕ್ಷದ್ವೀಪದಲ್ಲಿ ಭಾರೀ ಮಳೆಯಾಗಲಿದೆ.

ಜೊತೆಗೆ, ಕೇರಳದ ಕರಾವಳಿ ತೀರದಲ್ಲಿ ಗಂಟೆಗೆ 50 ಕಿ.ಮೀಯಿಂದ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿಯೂ ಬೀಸಲಿದೆ. ಶನಿವಾರದವರೆಗೆ ಕಡಲು ಪ್ರಕ್ಷುಬ್ಧವಾಗಿರಲಿದೆ ಆದ್ದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ. ಈ ವರ್ಷದ ಜೂನ್‌ನಿಂದ ಸೆಪ್ಟಂಬರ್ ಅವಧಿಯಲ್ಲಿ ಭಾರತದಲ್ಲಿ ವಾರ್ಷಿಕ ಸರಾಸರಿಯ 70%ಕ್ಕೂ ಅಧಿಕ ಮಳೆಯಾಗಿದೆ. ಈ ಬಾರಿ ಮುಂಗಾರು ಮಳೆ ವಾಡಿಕೆಯಂತೆ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News