ರಾಜ್ಯದಲ್ಲಿ ಜೂ.13ರಿಂದ ಮುಂಗಾರು ಚುರುಕು: ಕರಾವಳಿಯಲ್ಲಿ ಜೂ.14ರಂದು ರೆಡ್ ಅಲರ್ಟ್

Update: 2021-06-10 12:53 GMT

ಬೆಂಗಳೂರು, ಜೂ.10: ತೇವಾಂಶ ಕೊರತೆ ಹಾಗೂ ಗಾಳಿಯ ವೇಗ ಇಲ್ಲದಿರುವ ಕಾರಣ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ದುರ್ಬಲಗೊಂಡಿರುವ ಮುಂಗಾರು ಮಾರುತಗಳು ಜೂ.13ರಿಂದ ಚುರುಕು ಪಡೆದುಕೊಳ್ಳಲಿವೆ.

ಈ ಹಿನ್ನೆಲೆಯಲ್ಲಿ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಜೂ.13ರಂದು ಆರೆಂಜ್, ಜೂ.14ರಂದು ರೆಡ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಜೂ.13ರಿಂದ 2 ದಿನ ಆರೆಂಜ್ ಅಲರ್ಟ್ ಇದ್ದರೆ, ಬಳ್ಳಾರಿ, ಚಿತ್ರದುರ್ಗ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು ಮತ್ತು ಯಾದಗಿರಿಯಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಇತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News