ನಿರ್ಮಲಾ ಸೀತಾರಾಮನ್ ರಾಜ್ಯದ ಪಾಲಿಗೆ ಹೆಗಲೇರಿದ ಭೂತ: ದಿನೇಶ್ ಗುಂಡೂರಾವ್ ಲೇವಡಿ

Update: 2021-06-10 13:13 GMT

ಬೆಂಗಳೂರು, ಜೂ. 10: `ರಾಜ್ಯಸಭೆಗೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಪಾಲಿಗೆ ಹೆಗಲೇರಿದ ಭೂತವಾಗಿದ್ದಾರೆ. ಈ ಹಿಂದೆಯೂ 15ನೆ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ಜಿಎಸ್ಪಿ ನಷ್ಟದ 5 ಸಾವಿರ ಕೋಟಿ ರೂ.ಅನುದಾನಕ್ಕೆ ತಡೆ ನೀಡಿದ್ದರು. ಇದೀಗ ಆದಾಯ ಕೊರತೆ ಹಣದಲ್ಲಿ ಬಿಡಿಗಾಸು ನೀಡಿ ದ್ರೋಹ ಮಾಡಿದ್ದಾರೆ. ಇದು ಉಂಡ ಮನೆಗೆ ಎರಡು ಬಗೆದಂತಲ್ಲವೆ? ಈ ರಾಜ್ಯ ಸರಕಾರಕ್ಕೆ ಜನರ ಬಗ್ಗೆ ಕೊಂಚ ಕನಿಕರ ಬೇಡವೆ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕೊರೊನ ಸುಳಿಯಲ್ಲಿ ಜನ ಆರ್ಥಿಕವಾಗಿ ಸೋತು ಸುಣ್ಣವಾಗಿದ್ದಾರೆ. ದುರಂತವೆಂದರೆ ರಾಜ್ಯ ಸರಕಾರವೇ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಹೀಗಿರುವಾಗ ವಿದ್ಯುತ್ ಬಿಲ್ ಏರಿಸಿ ಜನರನ್ನು ದರೋಡೆ ಮಾಡುವ ದುರ್ಬುದ್ದಿ ಏಕೆ? ಇದು ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಂಡಂತಲ್ಲವೆ?' ಎಂದು ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News