ಎಟಿಎಂ ವಹಿವಾಟು ಶುಲ್ಕ ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡಿದ ಆರ್ ಬಿಐ, ಗ್ರಾಹಕರಿಗೆ ಬರೆ

Update: 2021-06-11 06:40 GMT

ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಸಮಿತಿಯ ಶಿಫಾರಸುಗಳ ಮೇರೆಗೆ ಸ್ವಯಂಚಾಲಿತ ಟೆಲ್ಲರ್ ಯಂತ್ರ (ಎಟಿಎಂ) ವಹಿವಾಟು ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡಿದೆ ಎಂದು India Today ವರದಿ ಮಾಡಿದೆ.

ಸೆಂಟ್ರಲ್ ಬ್ಯಾಂಕ್ ಗುರುವಾರ ಸುತ್ತೋಲೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಟಿಎಂಗಳು ಹಾಗೂ  ಹಣಕಾಸುಯೇತರ ವಹಿವಾಟುಗಳ ಮೂಲಕ ಪ್ರತಿ ವಹಿವಾಟಿಗೆ ಇಂಟರ್ ಚೇಂಜ್ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡುತ್ತದೆ. ಆಗಸ್ಟ್ 1, 2021 ರಿಂದ ಬ್ಯಾಂಕುಗಳು ಎಟಿಎಂ ವಹಿವಾಟು ಶುಲ್ಕವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಆಗಸ್ಟ್ 2012 ರಲ್ಲಿ ಎಟಿಎಂ ವಹಿವಾಟಿನ ಇಂಟರ್ ಚೇಂಜ್ ಶುಲ್ಕ ರಚನೆಯಲ್ಲಿ ಕೊನೆಯ ಬಾರಿಯ ಬದಲಾವಣೆ ನಡೆದಿದೆ ಎಂದು ಆರ್ ಬಿಐ ತಿಳಿಸಿದೆ. ಗ್ರಾಹಕರು ಪಾವತಿಸಬೇಕಾದ ಶುಲ್ಕಗಳನ್ನು ಕೊನೆಯದಾಗಿ ಆಗಸ್ಟ್ 2014 ರಲ್ಲಿ ಪರಿಷ್ಕರಿಸಲಾಗಿತ್ತು.

ಎಟಿಎಂ ವಹಿವಾಟು ಶುಲ್ಕವನ್ನು ಬದಲಾವಣೆಯ ಮಾಡಿ  ಗಣನೀಯ ಸಮಯ ಕಳೆದಿದೆ ಎಂದು ಒಪ್ಪಿಕೊಂಡ ಆರ್‌ಬಿಐ, ಪ್ರತಿ  ಹಣಕಾಸಿನ ವಹಿವಾಟಿಗೆ ಇಂಟರ್ ಚೇಂಜ್ ಶುಲ್ಕವನ್ನು 15 ರೂ.ನಿಂದ 17 ರೂ.ಗೆ ಹೆಚ್ಚಿಸಲು ಗ್ರೀನ್ ಸಿಗ್ನಲ್ ನೀಡಿದೆ.

ಗ್ರಾಹಕರು ಈಗಲೂ ಹಣಕಾಸು ಮತ್ತು ಹಣಕಾಸುಯೇತರ ವಹಿವಾಟುಗಳನ್ನು ಒಳಗೊಂಡಂತೆ  ಪ್ರತಿ ತಿಂಗಳು ತಮ್ಮದೇ ಬ್ಯಾಂಕ್ ಎಟಿಎಂಗಳಿಂದ ಐದು ಉಚಿತ ವಹಿವಾಟುಗಳಿಗೆ ಅರ್ಹರಾಗಿದ್ದಾರೆ.  ಅವರು ಮಿತಿಯನ್ನು ಮೀರಿ ನಡೆಸುವ ವಹಿವಾಟುಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

ಏತನ್ಮಧ್ಯೆ, ಗ್ರಾಹಕರಿಗೆ ಮೆಟ್ರೊ ನಗರಗಳಲ್ಲಿನ ಇತರ ಬ್ಯಾಂಕುಗಳ ಎಟಿಎಂಗಳಿಂದ ಮೂರು ಉಚಿತ ವಹಿವಾಟು ಹಾಗೂ  ಮೆಟ್ರೋ ಅಲ್ಲದ ನಗರಗಳಲ್ಲಿ ಐದು ವಹಿವಾಟುಗಳಿಗೆ ಅವಕಾಶ ನೀಡಲಾಗಿದೆ.

ಉಚಿತ ವಹಿವಾಟಿನ ಹೊರತಾಗಿ, ಗ್ರಾಹಕರ ಶುಲ್ಕದ ಸೀಲಿಂಗ್ / ಕ್ಯಾಪ್ ಪ್ರತಿ ವಹಿವಾಟಿಗೆ 20 ರೂ. ಆಗಿದೆ ಎಂದು ಆರ್ ಬಿ ಐ ತಿಳಿಸಿದೆ. ಇದರರ್ಥ ಗ್ರಾಹಕರು ಉಚಿತ ಮಿತಿಯನ್ನು ಮೀರಿ ಇತರ ಬ್ಯಾಂಕುಗಳಲ್ಲಿ ನಡೆಸುವ ವಹಿವಾಟಿಗೆ 20 ರೂ. ಶುಲ್ಕ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News