ಜೂನ್ 26 ರಂದು ದೇಶಾದ್ಯಂತದ ಎಲ್ಲಾ ರಾಜಭವನಗಳಲ್ಲಿ ರೈತರಿಂದ ಘೇರಾವ್: ಕಿಸಾನ್ ಮೋರ್ಚಾ

Update: 2021-06-11 17:48 GMT

ಹೊಸದಿಲ್ಲಿ:ಕೇಂದ್ರದ ಮೂರು ಹೊಸ ಕೃಷಿ ಮಾರುಕಟ್ಟೆ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ  ಪ್ರತಿಭಟನೆಗೆ  ಏಳು ತಿಂಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ  ಜೂನ್ 26 ರಂದು ದೇಶಾದ್ಯಂತ 'ರಾಜ್ ಭವನ ಘೇರಾವ್' ಆಯೋಜಿಸುವುದಾಗಿ 40 ಕ್ಕೂ ಹೆಚ್ಚು ರೈತ ಸಂಘಗಳ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಶುಕ್ರವಾರ ಪ್ರಕಟಿಸಿದೆ.

ರೈತರು ಆಯಾ ರಾಜ್ಯಗಳಲ್ಲಿನ ರಾಜ್ಯಪಾಲರ ಅಧಿಕೃತ ನಿವಾಸಗಳ ಹೊರಗೆ ಪ್ರದರ್ಶನಗಳನ್ನು ನಡೆಸುತ್ತಾರೆ ಹಾಗೂ  ಜೂನ್ 26 ರಂದು ನಡೆಯುವ ಪ್ರತಿಭಟನೆಯ ಸಂದರ್ಭದಲ್ಲಿ ಕಪ್ಪು ಧ್ವಜಗಳನ್ನು ತೋರಿಸಲಿದ್ದಾರೆ.

ರಾಷ್ಟ್ರಪತಿ  ರಾಮ ನಾಥ್ ಕೋವಿಂದ್ ಅವರಿಗೆ ಪ್ರತಿ ರಾಜ್ಯದ ರಾಜ್ಯಪಾಲರ ಮೂಲಕ ಯೂನಿಯನ್ ಜ್ಞಾಪಕ ಪತ್ರಗಳನ್ನು ಕಳುಹಿಸಲಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಯುಕ್ತ ಮೋರ್ಚದ  ರೈತ ಮುಖಂಡ ಇಂದರ್ ಜಿತ್ ಸಿಂಗ್, ಈ ದಿನವನ್ನು "ಖೇತಿ ಬಚಾವೊ, ಲೋಕತಂತ್ರ ಬಚಾವೊ ದಿವಸ್ (ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವ ದಿನವನ್ನು ಉಳಿಸಿ)" ಎಂದು ಆಚರಿಸಲಾಗುವುದು ಎಂದು ಹೇಳಿದರು.

"ನಾವು ರಾಜ್ ಭವನಗಳಲ್ಲಿ ಕಪ್ಪು ಧ್ವಜಗಳನ್ನು ತೋರಿಸುವುದರ ಮೂಲಕ ಮತ್ತು ರಾಷ್ಟ್ರಪತಿಗಳ ಪ್ರತಿನಿಧಿಯಾಗಿರುವ ಪ್ರತಿ ರಾಜ್ಯದ ಗವರ್ನರ್ ಮೂಲಕ ರಾಷ್ಟ್ರಪತಿಗೆ ಜ್ಞಾಪಕ ಪತ್ರವನ್ನು ನೀಡುವ ಮೂಲಕ ಪ್ರತಿಭಟಿಸುತ್ತೇವೆ. ಜೂನ್ 26,  1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ದಿನ ಹಾಗೂ ಆ ದಿನ  ನಾವು ಏಳು ತಿಂಗಳುಗಳು ಪೂರ್ಣಗೊಳಿಸುತ್ತೇವೆ. ಈ ಸರ್ವಾಧಿಕಾರದ ವಾತಾವರಣದಲ್ಲಿ ಕೃಷಿಯ ಜೊತೆಗೆ ಜನರ ಪ್ರಜಾಪ್ರಭುತ್ವದ ಹಕ್ಕುಗಳ ಮೇಲೂ ದಾಳಿ ಮಾಡಲಾಗಿದೆ. ಇದು ಅಘೋಷಿತ ತುರ್ತು ಪರಿಸ್ಥಿತಿ "ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News