ತರೀಕೆರೆ: ಕೋವಿಡ್ ಕೇರ್ ಸೆಂಟರ್ ನಲ್ಲಿ ನೃತ್ಯ ಮಾಡಿದ ಮಾಜಿ ಶಾಸಕ ಶ್ರೀನಿವಾಸ್

Update: 2021-06-11 17:50 GMT

ಚಿಕ್ಕಮಗಳೂರು, ಜೂ.11: ಇತ್ತೀಚಿಗೆ ಚಿಕ್ಕಮಗಳೂರು ನಗರದ ಕೋವಿಡ್ ಕೇರ್ ಸೆಂಟರ್ ಒಂದರಲ್ಲಿ ತಾಲೂಕು ಆಡಳಿತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗಾನಸುಧೆ ಕಾರ್ಯಕ್ರಮ ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದವರು ಸಖತ್ತಾಗಿ ಹೆಜ್ಜೆ ಹಾಕಿದ್ದರು. ಗುರುವಾರ ರಾತ್ರಿ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಮಾಜಿ ಶಾಸಕ ಶ್ರೀನಿವಾಸ್ ನೇತೃತ್ವದ ತಂಡ ಸೋಂಕಿತರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಸಲುವಾಗಿ ಹಾಡೊಂದಕ್ಕೆ ಭರ್ಜರಿ ನೃತ್ಯ ಮಾಡಿದೆ.

ತರೀಕೆರೆಯ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಗುರುವಾರ ರಾತ್ರಿ ರಸಸಂಜೆ ಕಾರ್ಯಕ್ರಮ ಏರ್ಪಡಿಸಿದ್ದು, ಈ ಕಾರ್ಯಕ್ರಮದ ವೇಳೆ ಮಾಜಿ ಶಾಸಕ ಹಾಗೂ ಅವರ ತಂಡ 'ಯಾರೇ ನೀನು, ರೋಜಾ ಹೂವೆ' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಮಾಜಿ ಶಾಸಕರ ಭರ್ಜರಿ ಡಾನ್ಸ್ ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕಾರ್ಯಕ್ರಮದ ವೇಳೆ ಮಾಜಿ ಶಾಸಕ ಶ್ರೀನಿವಾಸ್ ಸೋಂಕಿತರೊಂದಿಗೆ ಡಾನ್ಸ್ ಮಾಡಿರುವುದಲ್ಲೇ ಸೋಂಕಿತರೊಂದಿಗೆ ಕುಳಿತು ಊಟವನ್ನೂ ಮಾಡಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಮಾಜಿ ಶಾಸಕರೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಸದಸ್ಯರು, ಸ್ಥಳೀಯ ಕಾಂಗ್ರೆಸ್ ಮುಖಂಡರೂ ಸಾಥ್ ನೀಡಿದ್ದರು.

ಸೋಂಕಿಗೆ ತುತ್ತಾದವರು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದ ವೇಳೆ ಅವರ ಕಷ್ಟಸುಖ ವಿಚಾರಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ಜನಪ್ರತಿನಿಧಿಗಳು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಾಗರಿಕರು ಕೊಂಡಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News