ನನ್ನ ದಲಿತಪರ ಅಂತಃಕರಣಕ್ಕೆ ಸಿದ್ದಲಿಂಗಯ್ಯರ ಕವನಗಳೇ ಸ್ಫೂರ್ತಿ: ನಿಡುಮಾಮಿಡಿ ಸ್ವಾಮೀಜಿ

Update: 2021-06-13 11:58 GMT

ಬೆಂಗಳೂರು, ಜೂ. 13: `ಕನ್ನಡ ಸಾಹಿತ್ಯ ಎಲ್ಲಿಯ ವರೆಗೂ ಉಳಿದಿರುತ್ತದೆಯೋ ಅಲ್ಲಿಯವರೆಗೂ ಕನ್ನಡದ ಖ್ಯಾತ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯ ಅವರು ಜೀವಂತವಾಗಿ ಉಳಿದಿರುತ್ತಾರೆ' ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಕನ್ನಡ ಸಾಹಿತ್ಯದಲ್ಲಿ ಮೊದಲಿಗೆ ದಲಿತ ಕಾವ್ಯದ ದನಿಯನ್ನು ಓದುವಂತೆ, ಕೇಳಿಸುವಂತೆ ಮಾಡಿದವರು ಡಾ.ಸಿದ್ದಲಿಂಗಯ್ಯ, ಅವರ `ಹೊಲೆ ಮಾದಿಗರ ಹಾಡು' ಕನ್ನಡ ಸಾಹಿತ್ಯದಲ್ಲಿ ದಲಿತ ಮನ್ವಂತರಕ್ಕೆ ನಾಂದಿ ಹಾಡಿದ ಕೃತಿ. `ಸಾವಿರಾರು ನದಿಗಳು' ಉತ್ತಮ ಕೃತಿ ಎನಿಸಿದರೂ `ಹೊಲೆ ಮಾದಿಗರ ಹಾಡು' ಸಾಮಾಜಿಕವಾಗಿ ಬೀರಿದ ಪ್ರಭಾವ ಅದ್ಭುತವಾದದ್ದು' ಎಂದು ಸ್ವಾಮೀಜಿ ಸ್ಮರಿಸಿದ್ದಾರೆ.

`ಮೂರು ದಶಕಗಳ ಅವಧಿಯಲ್ಲಿ ಅವರೊಟ್ಟಿಗೆ ನೂರಾರು ಸಭೆ, ಸಮಾರಂಭಗಳಲ್ಲಿ ಭಾಗಿಯಾಗಿದ್ದೇನೆ. ಹಲವು ಬಾರಿ ಅವರು ಶ್ರೀಮಠಕ್ಕೆ ಭೇಟಿ ನೀಡಿ ಅವರು ಅಭಿಪ್ರಾಯವನ್ನು ವಿನಿಮಯ ಮಾಡಿಕೊಂಡದ್ದನ್ನು ನಾನು ಮರೆಯುವಂತಿಲ್ಲ. ನನ್ನೊಳಗಿನ ದಲಿತಪರ ಅಂತಃಕರಣಕ್ಕೆ ಸಿದ್ದಲಿಂಗಯ್ಯ ಅವರ ಕವನಗಳ ಮೂಲಕ ಸ್ಫೂರ್ತಿ ತುಂಬಿದ್ದಾರೆ ಎಂದು ವೀರಭದ್ರ ಚನ್ನಮಲ್ಲ ಸ್ವಾಮಿ ಪ್ರಕಟಣೆಯಲ್ಲಿ ನೆನಪು ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News