ಎಪ್ರಿಲ್ 1 ರ ಬಳಿಕ ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಇಳಿಕೆ

Update: 2021-06-14 07:21 GMT
photo: The Indian Express

ಹೊಸದಿಲ್ಲಿ: ಭಾರತದಲ್ಲಿ ಸೋಮವಾರ 70,421 ಹೊಸ ಕೋವಿಡ್ -19 ಪ್ರಕರಣಗಳು ಹಾಗೂ  3,921 ಸಾವುಗಳು ವರದಿಯಾಗಿದೆ.  ಸತತ 7ನೇ ದಿನ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯು ಒಂದು ಲಕ್ಷಕ್ಕಿಂತ ಕೆಳಗೆ ಇಳಿದಿದೆ.  ಎಪ್ರಿಲ್  1ರ ಬಳಿಕ ದೈನಂದಿನ ಪ್ರಕರಣಗಳು 70,421ಕ್ಕೆ ತಲುಪಿದೆ.

ದೈನಂದಿನ ಪ್ರಕರಣಗಳ ಸಂಖ್ಯೆಯು ಇಳಿಮುಖವಾಗಿದೆ. ದೇಶದಲ್ಲಿ ಇದುವರೆಗೆ ಒಟ್ಟು 2,95,10,410 ಪ್ರಕರಣಗಳು ಹಾಗೂ  3,74,305 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದ ದೈನಂದಿನ ಪರೀಕ್ಷಾ ಪಾಸಿಟಿವಿಟಿ ರೇಟ್ ಇಳಿಮುಖವಾಗುತ್ತಿದೆ. ಸತತ ಏಳನೇ ದಿನ ಅದು ಶೇ. 5 ಕ್ಕಿಂತ ಕಡಿಮೆ ಇದ್ದುಈಗ  ಶೇ 4.71 ರಷ್ಟಿದೆ.

ತಮಿಳುನಾಡಿನ ದೈನಂದಿನ ಕೊರೋನ ಪ್ರಕರಣವು 14,106 ಏರಿಕೆಯಾಗಿದ್ದು,  ಆನಂತರ ಕೇರಳ (11,584 ) ಹಾಗೂ  ಮಹಾರಾಷ್ಟ್ರ (10,442 ) ರಾಜ್ಯಗಳಿವೆ.

ದಿಲ್ಲಿಯ ಅಂಗಡಿಗಳು, ಮಾಲ್‌ಗಳು ಹಾಗೂ  ರೆಸ್ಟೋರೆಂಟ್‌ಗಳು ಇಂದಿನಿಂದ ತೆರೆದಿದ್ದು, ರಾಷ್ಟ್ರ ರಾಜಧಾನಿಯಲ್ಲಿನ ಕೋವಿಡ್ ಸಂಖ್ಯೆಗಳು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಹಿಂದಿನ ಬೆಸ-ಸಮ ವ್ಯವಸ್ಥೆಗೆ ಬದಲಾಗಿ ವಾರದಲ್ಲಿ ಏಳು ದಿನ ಅಂಗಡಿಗಳು ತೆರೆದಿರುತ್ತವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News