'ಸೋಂಕಿತ ಸರಕಾರ' ಆಡಳಿತದಲ್ಲಿ ಸೋಂಕುಗಳು ಸಾಲುಗಟ್ಟಿ ನಿಂತಿವೆ: ಕಾಂಗ್ರೆಸ್

Update: 2021-06-14 12:23 GMT

ಬೆಂಗಳೂರು, ಜೂ. 14: `ಕೋವಿಡ್ ಲಾಕ್‍ಡೌನ್‍ನಿಂದಾಗಿ ರಾಜ್ಯದ ಎಲ್ಲ ರಂಗಗಳಲ್ಲಿ ಸ್ಮಶಾನ ಮೌನ ಆವರಿಸಿದೆ, ಬೆಲೆ ಏರಿಕೆಯಿಂದ ಜನತೆ ಜರ್ಜರಿತರಾಗಿದ್ದಾರೆ, ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಕುಸಿದಿದೆ. ಅತೃಪ್ತರೇ ಸೇರಿ ರಚಿಸಿದ `ಅತೃಪ್ತ ಸರಕಾರ' ಈ ಪರಿಸ್ಥಿತಿಯ ಚೇತರಿಕೆಗೆ ಗಂಭೀರ ಚಿಂತನೆ ನಡೆಸದೆ `ಬಿಎಸ್‍ವೈ ಮುಕ್ತ ಬಿಜೆಪಿ' ಬಗ್ಗೆಯೇ ಕ್ರಿಯಾಶೀಲವಾಗಿದೆ!' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಕೋವಿಡ್ ಸೋಂಕಿನ ನಿರ್ವಹಣೆ ವೈಫಲ್ಯದ ಉದಾಹರಣೆ ಕಣ್ಣೆದುರಿಗಿರುವಾಗಲೇ ಕಪ್ಪು ಶಿಲೀಂಧ್ರ ರೋಗವನ್ನು ನಿರ್ಲಕ್ಷಿಸಿ ಸರಕಾರ ಧೂರ್ತತನ ತೋರುತ್ತಿದೆ. ಬ್ಲಾಕ್ ಫಂಗಸ್ ಬಗ್ಗೆ ಸ್ಪಷ್ಟ ಅಂಕಿ ಅಂಶಗಳನ್ನು ಪಡೆಯುವ ವ್ಯವಸ್ಥೆ ಮಾಡದ ಸರಕಾರ ಆಂಫೋಟೆರಿಸನ್-ಬಿ ಪೂರೈಕೆಯಲ್ಲಿ ಸೋತಿದೆ. ಈ `ಸೋಂಕಿತ ಸರಕಾರ' ಆಡಳಿತದಲ್ಲಿ ಸೋಂಕುಗಳು ಸಾಲುಗಟ್ಟಿ ನಿಂತಿವೆ!' ಎಂದು ವಾಗ್ದಾಳಿ ನಡೆಸಿದೆ/

`ಸಾಲ ನೀಡಿದ ವ್ಯಕ್ತಿಯೂ ಸಾಲಗಾರರ ಕುಟುಂಬದಲ್ಲಿ ಸಾವಾದರೆ ಹಣ ಹಿಂದಿರುಗಿಸಲು ಸಮಯ ನೀಡುತ್ತಾನೆ. ಕೋವಿಡ್ ರಣಕೇಕೆಯ ನಡುವೆಯೂ ಬಿಜೆಪಿ ಪೆಟ್ರೋಲ್-ಡಿಸೇಲ್ ದರವನ್ನು ಏರಿಸಿದೆ. ವಿದ್ಯುತ್ ದರ ಹೆಚ್ಚಿಸಿದೆ. ಜನರಿಗೆ ಕಷ್ಟವನ್ನು ಹೆಚ್ಚಿಸಲು ಬಿಜೆಪಿ ಅನುಸರಿಸುವ ವಿವಿಧ ವಿಧಾನಗಳಿವು' ಎಂದು ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News