ಮೈಸೂರಿನಲ್ಲಿ ನಡೆದ ಭೂ ಅಕ್ರಮಗಳ ತುರ್ತು ತನಿಖೆ ನಡೆಸುವಂತೆ ಏಕಾಂಗಿ ಪ್ರತಿಭಟನೆ

Update: 2021-06-14 16:16 GMT

ಮೈಸೂರು, ಜೂ.14: ಮೈಸೂರನ್ನು ಭೂಗಳ್ಳರಿಂದ ರಕ್ಷಿಸಿ ಭೂ ಅಕ್ರಮಗಳ ಪಾರದರ್ಶಕ ತನಿಖೆ ನಡೆಸಬೇಕು. ಹಿಂದಿನ ಜಿಲ್ಲಾಧಿಕಾರಿ ಮೈಸೂರಿನಲ್ಲಿ ನಡೆಸಿರುವ ಭೂ ಅಕ್ರಮದ ಬಗ್ಗೆ ಮಾಡಿರುವ ಆದೇಶಗಳ ತುರ್ತು ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಏಕಾಂಗಿ ಪ್ರತಿಭಟನೆ ನಡೆಸಿದರು.

ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಭೂಮಿಯನ್ನು ಕೊಳ್ಳೆ ಹೊಡೆಯಲಾಗಿದೆ. ಅದರ ಬಗ್ಗೆ ತನಿಖೆ ಆಗಬೇಕೆಂದು ಒತ್ತಾಯಿಸುತ್ತೇನೆ ಎಂದರು.

ಸಾ.ರಾ.ಕನ್ವೆನ್ಶನ್ ಸೆಂಟರ್ ಗೆ ಸಂಬಂಧಿಸಿ ಸರ್ವೆ ಆಗಬೇಕು. ಸರ್ವೆ ನಂಬರ್ 98 ದಟ್ಟಗಳ್ಳಿ ಅಲ್ಲಿ ಎನ್ ಕ್ರೋಚ್ಮೆಂಟ್ ಆಗಿದೆ ಎಂದು ದಾಖಲೆಗಳ ಸಮೇತ ಆರ್ ಸಿ ಅವರಿಗೆ ನಾನು ಕೊಡುತ್ತಿದ್ದೇನೆ. ದಾಖಲೆಗಳಲ್ಲಿ ಎನ್ ಕ್ರೋಚ್ಮೆಂಟ್ ಆಗಿದೆ ಎಂಬ ಮಾಹಿತಿ ಇದೆ. ಅದನ್ನು ತನಿಖೆ ಮಾಡಿ ಎನ್ ಕ್ರೋಚ್ ಮೆಂಟ್ ಮಾಡಿರುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸರ್ವೇ ನಂಬರ್ 82 ದಟ್ಟಗಳ್ಳಿ 160 ಎಕರೆ ಜಾಗ ಇವತ್ತಿನವರೆಗೂ ಸರ್ಕಾರಿ ಜಾಗ ಎಂದು ಹೇಳಿ 1921ರಿಂದ ದಾಖಲೆ ಇದೆ. ದಾನಪತ್ರದ ಮೂಲಕ ನಕಲಿ ದಾಖಲೆ ಸೃಷ್ಟಿ ಮಾಡುವುದರ ಮೂಲಕ ಸುಮಾರು ಐದು ಸೈಟ್ ಗಳನ್ನು ನಿವೇಶನವಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದರು.

ಒಬ್ಬರು ತಾಯಮ್ಮ ಅನ್ನುವವರ ಹೆಸರಿಗೆ ಮತ್ತೆ ತಾಯಮ್ಮ ಅವರು ಶಶಾಂಕ್ ಅರಸ್ ಎಂಬವರ ಹೆಸರಿಗೆ ಪರಭಾರೆ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಟೈಟಲ್ ಡೀಡ್ ಮತ್ತು ಸಂಬಂಧಿಸಿದ ದಾಖಲೆಗಳಿವೆ. ಇದಕ್ಕೆ ಸಂಬಂಧಿಸಿದ ಕಾರ್ಪೋರೇಶನ್ ದಾಖಲೆಗಳನ್ನು ಕೇಳಿದರೆ ದಾಖಲೆ ಇಲ್ಲ ಅಂತ ಹೇಳುತ್ತಾರೆ. ಅಲ್ಲಿ 80 ಸಾವಿರ ಚದರ ಅಡಿಗಳನ್ನು ನಿವೇಶನವನ್ನಾಗಿ ಪರಿವರ್ತನೆ ಮಾಡಲಾಗಿದೆ. ಸೈಟ್ ಮೆಜರ್ ಮೆಂಟ್ 60x250, 70x300 ಈ ರೀತಿ ಅಳತೆಯ ಐದು ನಿವೇಶನಗಳು ಸುಮಾರು 19 ಕೋಟಿ 57 ಲಕ್ಷ ಮೌಲ್ಯದ ಆಸ್ತಿಯನ್ನು ಭೂಗಳ್ಳರು ಹೊಡೆದಿರುವುದು, ತಾಯಮ್ಮ ಅನ್ನೋರಾರು? ಶಶಾಂಕ್ ಅನ್ನೋರಾರು? ಆ ದಾಖಲೆಗಳು ಹೇಗೆ ಸೃಷ್ಟಿಯಾಯಿತು ಅನ್ನೋದರ ಬಗ್ಗೆ ತನಿಖೆಯಾಗಬೇಕು, ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ದಾಖಲೆ ಸಹಿತ ದೂರು ಕೊಡುತ್ತಿದ್ದೇನೆ ಎಂದು ಹೇಳಿದರು.

ಸಾ.ರಾ.ಮಹೇಶ್ ದಾಖಲೆ ನೀಡಿ ಸರ್ವೆ ಮಾಡಿಸುವಂತೆ ಪ್ರತಿಭಟನೆ ನಡೆಸಿ ಮನವಿ ನೀಡುತ್ತಾರೆ. ಎರಡು ದಿನ ಅವರಿಗೆ ನೀಡಿದ್ದಾರೆ. ನಾನು ಇಂದು ಮನವಿ ಕೊಡುತ್ತಿದ್ದೇನೆ. 21ನೇ ತಾರೀಖಿನೊಳಗಡೆ ಗಡುವು ಕೊಟ್ಟಿದ್ದೇನೆ. ಸರ್ವೆ ಮಾಡಿಸಿ ಕ್ರಮ ತೆಗೆದುಕೊಳ್ಳಬೇಕು. ಮುಡಾ ಆಯುಕ್ತರೂ ಕೂಡ ಬಹಳಷ್ಟು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಅಮಾನತು ಮಾಡಬೇಕು. ಯಾಕೆಂದರೆ ಮೂಡಾದಲ್ಲಿ ಆಸ್ತಿ ಸಂರಕ್ಷಣೆ ಮಾಡುವಲ್ಲಿ ಆಯುಕ್ತರು ವಿಫಲರಾಗಿದ್ದಾರೆ. ಅಮಾನತು ಮಾಡಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News