ಶಿವಮೊಗ್ಗ: ದೇವಸ್ಥಾನದ ಬೀಗ ಒಡೆದು ಆಭರಣ ಕಳ್ಳತನ

Update: 2021-06-15 12:22 GMT

ಶಿವಮೊಗ್ಗ, ಜೂ.15: ತಾಲೂಕಿನ ಪ್ರಸಿದ್ದ ಮುಜರಾಯಿ ದೇವಸ್ಥಾನವೊಂದರ ಬೀಗ ಒಡೆದ ಕಳ್ಳರು 3 ಕೆಜಿ ಪಂಚಲೋಹದ ಬಂಗಾರ ಲೇಪಿತ ಆಭರಣಗಳನ್ನು ಕದ್ದೊಯ್ದಿದ್ದಾರೆ. 

ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಮುಖ್ಯದ್ವಾರ ಮತ್ತು ಮುಖ ಮಂಟಪದ ಬಾಗಿಲಿಗೆ ಹಾಕಲಾಗಿದ್ದ ಬೀಗಗಳನ್ನ ಒಡೆದು ಕಳ್ಳರು ಕೃತ್ಯ ಎಸಗಿದ್ದಾರೆ.

ತಲಾ 500 ಗ್ರಾಂ ತೂಕದ ಕೀರಿಟ, ಶಂಖಹಸ್ತ, ಚಕ್ರಹಸ್ತ, ದೇವರ ಮೂರ್ತಿ ಮೇಲೆ ಹಾಕಿರುವ 750 ಗ್ರಾಂ ತೂಕದ ಎದೆ ಕವಚ, ಎದೆ ಭಾಗದ ಲಕ್ಷ್ಮೀ ಪದಕ, ಸೂರ್ಯ ಕಟಾರ, ವರದ ಹಸ್ತ, ಕವಿ ಹಸ್ತ, ಸೊಂಟದ ಡಾಬು, ಎರಡು ಪಾದಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಇವೆಲ್ಲವೂ ಬಂಗಾರ ಲೇಪಿತ ಪಂಚಲೋಹದಿಂದ ತಯಾರಿಸಲಾಗಿತ್ತು. ಇವುಗಳ ಅಂದಾಜು ಮೊತ್ತ  81 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News