ಮೂರು ಈಶಾನ್ಯ ರಾಜ್ಯಗಳಲ್ಲಿ ಭೂಕಂಪ

Update: 2021-06-18 03:13 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದ ಮೂರು ಈಶಾನ್ಯ ರಾಜ್ಯಗಳಲ್ಲಿ ಅಂದರೆ ಅಸ್ಸಾಂ, ಮಣಿಪುರ ಹಾಗೂ ಮೇಘಾಲಯಗಳಲ್ಲಿ ಶುಕ್ರವಾರ ಮುಂಜಾನೆ ಲಘು ಭೂಕಂಪ ಸಂಭವಿಸಿದೆ.

ಅಸ್ಸಾಂನ ಸೋನಿಪತ್‌ನಲ್ಲಿ 4.1 ತೀವ್ರತೆಯ, ಮಣಿಪುರದ ಚಂಡೇಲ್ ಮತ್ತು ಪಶ್ಚಿಮ ಖಾಸಿ ಹಿಲ್ಸ್ ಪ್ರದೇಶದಲ್ಲಿ 3.0 ತೀವ್ರತೆ ಮತ್ತು ಮೇಘಾಲಯದಲ್ಲಿ 2.6 ತೀವ್ರತೆಯ ಲಘು ಕಂಪನಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಭೂಕಂಪ ಸಂಸ್ಥೆ (ಎನ್‌ಸಿಎಸ್) ಪ್ರಕಟಿಸಿದೆ.

ಅಸ್ಸಾಂನ ತೇಜ್‌ಪುರ ಪಟ್ಟಣದಲ್ಲಿ ಕಳೆದ ಮೂರು ದಿನಗಳಲ್ಲಿ ಸಂಭವಿಸುತ್ತಿರುವ ಎರಡನೇ ಭೂಕಂಪ ಇದಾಗಿದೆ. ಮಂಗಳವಾರ ರಾತ್ರಿ ರೇಜ್‌ಪುರದಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿತ್ತು. 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ ಈ ಕಂಪನದ ಕೇಂದ್ರಬಿಂದು ತೇಜ್‌ಪುರದ ಪಶ್ಚಿಮಕ್ಕೆ 60 ಕಿಲೋಮೀಟರ್ ದೂರದಲ್ಲಿತ್ತು. ಶುಕ್ರವಾರದ ಭೂಕಂಪ 22 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ತೇಜ್‌ಪುರದಿಂದ 36 ಕಿಲೋಮೀಟರ್ ದೂರದಲ್ಲಿ ಕೇಂದ್ರಬಿಂದು ಇತ್ತು ಎಂದು ಎನ್‌ಸಿಎಸ್ ವಿವರ ನೀಡಿದೆ.

ಮಣಿಪುರದ ಚಾಂಡೇಲ್‌ನಲ್ಲಿ ಸಂಭವಿಸಿದ ಕಂಪನದ ತೀವ್ರತೆ 3.0ರಷ್ಟಿತ್ತು. 10 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿತ್ತು. ಇದಕ್ಕೂ ಮುನ್ನ ರಾಜ್ಯದಲ್ಲಿ ಮೇ 23ರಂದು 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News