ಕೆಎಸ್‌ಆರ್‌ಟಿಸಿ ಮಾಸಿಕ ಬಸ್ ಪಾಸ್ ಅವಧಿ ಜುಲೈ 8ರವರೆಗೆ ವಿಸ್ತರಣೆ

Update: 2021-06-21 12:01 GMT

ಬೆಂಗಳೂರು, ಜೂ.21: ಲಾಕ್‍ಡೌನ್ ನಂತರದ ದಿನಾಂಕಗಳಂದು ಅವಧಿ ಮುಕ್ತಾಯಗೊಂಡ ಹಂತವಾರು ಮಾಸಿಕ ಪಾಸುಗಳ ಮಾನ್ಯತಾ ಅವಧಿಯನ್ನು ಜು.8ರ ವರೆಗೆ ವಿಸ್ತರಿಸಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಸಾರಿಗೆ ಸಿಬ್ಬಂದಿಗಳ ಅನಿರ್ದಿಷ್ಟಾವಧಿ ಮುಷ್ಕರದ ಅವಧಿಯಲ್ಲಿ ಹಾಗೂ ಎ.28ರಿಂದ ಕೋವಿಡ್ ಲಾಕ್‍ಡೌನ್ ಪ್ರಾರಂಭದ ಅವಧಿಯಲ್ಲಿ ಮಾಸಿಕ ಪಾಸ್ ಪಡೆದವರು ಪಾಸ್ ಅವಧಿ ಮುಕ್ತಾಯಗೊಂಡಿದ್ದರೂ ಗರಿಷ್ಠ 18(ಜು.8) ದಿನಗಳವರೆಗೆ ಪಾಸ್‍ಗಳು ಚಾಲ್ತಿಯಲ್ಲಿರುತ್ತದೆ.

ಎ.8ರಿಂದ 27ರ ಅವಧಿಯಲ್ಲಿ ಮಾಸಿಕ ಪಾಸುಗಳನ್ನು ಪಡೆದಿದ್ದಲ್ಲಿ ಅಂತಹ ಪ್ರಯಾಣಿಕರಿಗೆ ದಿನಾಂಕಗಳನ್ನು ಸೂಕ್ತವಾಗಿ ಪರಿಶೀಲಿಸಿ, ಅಷ್ಟು ದಿನಗಳಿಗೆ ಅನುಗುಣವಾಗಿ ವಿಸ್ತರಿಸಲು ಕ್ರಮ ವಹಿಸಲಾಗುವುದು. ಈ ಸಂಬಂಧ ಪಾಸುದಾರರು ಪಾಸು ವಿತರಣೆಯ ಕೌಂಟರ್ ನಲ್ಲಿ ಚಾಲ್ತಿ ಅವಧಿಯ ದಿನಗಳಿಗೆ ವಿಸ್ತರಣೆಯಾಗಿರುವ ಬಗ್ಗೆ ವಿಸ್ತರಣಾ ದಿನಾಂಕ, ಸಹಿ ಹಾಗೂ ಮೊಹರನ್ನು ಹಾಕಿಸಿಕೊಳ್ಳುವುದು ಕಡ್ಡಾಯವೆಂದು ಕೆಎಸ್‌ಆರ್‌ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News