ಕಾಶ್ಮೀರ ವಿಷಯದಲ್ಲಿ ಮತ್ತೆ ಅಮೆರಿಕದ ಹಸ್ತಕ್ಷೇಪ ಕೋರಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

Update: 2021-06-21 15:15 GMT

photo: twitter/@ImranKhanPTI

ಹೊಸದಿಲ್ಲಿ,ಜೂ.21: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದೊಂದಿಗಿನ ಕಾಶ್ಮೀರ ಬಿಕ್ಕಟ್ಟನ್ನು ಬಗೆಹರಿಸಲು ಹಸ್ತಕ್ಷೇಪ ಮಾಡುವಂತೆ ಮತ್ತೆ ಅಮೆರಿಕವನ್ನು ಕೋರಿದ್ದಾರೆ. ಕಾಶ್ಮೀರ ವಿಷಯದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಭಾರತವು ನಿರಂತರವಾಗಿ ತಿರಸ್ಕರಿಸುತ್ತಲೇ ಬಂದಿದೆ.

ಎಚ್‌ಬಿಒ ವಾಹಿನಿಯ ‘ಎಕ್ಸಿಯೊಸ್ ’ಸುದ್ದಿ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಖಾನ್ ಅಮೆರಿಕದ ಆಡಳಿತಕ್ಕೆ ಈ ಕರೆಯನ್ನು ನೀಡಿದ್ದಾರೆ. ಈ ಹಿಂದೆ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಾನ್ ಕೋರಿಕೆಯ ಮೇರೆಗೆ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧರಾಗಿದ್ದರು,ಆದರೆ ಇಂತಹ ಪ್ರಯತ್ನಗಳನ್ನು ಭಾರತವು ಸದಾ ತಿರಸ್ಕರಿಸುತ್ತಿದೆ.

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ತಾನು ಈ ವಿಷಯವನ್ನು ಪ್ರಸ್ತಾಪಿಸಿಲ್ಲ ಎಂದು ಒಪ್ಪಿಕೊಂಡಿರುವ ಖಾನ್,ತಮ್ಮಿಬ್ಬರ ಭೇಟಿ ನಡೆದರೆ ತಾನು ಕಾಶ್ಮೀರ ವಿಷಯವನ್ನು ಎತ್ತುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News