ಕೋವಿಡ್ ಸೋಂಕಿನಿಂದ ಮೃತರಾದವರ ಬಗ್ಗೆ ಉತ್ತರಪ್ರದೇಶ ಸರಕಾರದಿಂದ ಸುಳ್ಳು ಮಾಹಿತಿ: ಅಖಿಲೇಶ್ ಆರೋಪ

Update: 2021-06-22 17:38 GMT

ಲಕ್ನೋ, ಜೂ.22: ಕೋವಿಡ್ ಸೋಂಕಿನಿಂದ ಮೃತರಾದವರ ನಿಜವಾದ ಸಂಖ್ಯೆಯನ್ನು ಉತ್ತರಪ್ರದೇಶ ಅಡಗಿಸಿಟ್ಟು ಸುಳ್ಳು ಮಾಹಿತಿ ನೀಡುತ್ತಿದೆ. ಈ ಮೂಲಕ ತನ್ನ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. 

ಉತ್ತರಪ್ರದೇಶದ 24 ಜಿಲ್ಲೆಗಳಲ್ಲಿ 2020ರ ಜುಲೈ 1ರಿಂದ 2021ರ ಮಾರ್ಚ್ 51ರವರೆಗಿನ ಅವಧಿಯಲ್ಲಿ ಕೊರೋನದಿಂದ ಮೃತರಾದವರ ಸಂಖ್ಯೆ ಸರಕಾರದ ಅಂಕಿಅಂಶಗಳಿಗಿಂತ 43 ಪಟ್ಟು ಹೆಚ್ಚಾಗಿದೆ ಎಂದು ವರದಿಯೊಂದು ತಿಳಿಸಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ರಾಜ್ಯದ ನಾಗರಿಕ ನೋಂದಣಿ ವ್ಯವಸ್ಥೆ(ಸಿಆರ್ಎಸ್) ನೀಡಿದ ಉತ್ತರದಿಂದ ಈ ಮಾಹಿತಿ ಲಭ್ಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸರಕಾರದ ಮಾಹಿತಿಯಂತೆ, ಜೂನ್ 21ರವರೆಗೆ ರಾಜ್ಯದಲ್ಲಿ 17,04,476 ಒಟ್ಟು ಕೋವಿಡ್ ಪ್ರಕರಣ ಹಾಗೂ 22,224 ಮರಣ ಸಂಭವಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News