ಅಫ್ಘಾನಿಸ್ತಾನ ಶಾಂತಿ ಪ್ರಕ್ರಿಯೆಯಲ್ಲಿ ಪ್ರಾದೇಶಿಕ ಶಕ್ತಿಗಳಿಂದ ಅಡ್ಡಿ: ಭಾರತದ ವಿರುದ್ಧ ಪಾಕ್ ಪರೋಕ್ಷ ದಾಳಿ

Update: 2021-06-24 18:34 GMT

ಇಸ್ಲಾಮಾಬಾದ್, ಜೂ. 24: ಅಫ್ಘಾನಿಸ್ತಾನ ಶಾಂತಿ ಪ್ರಕ್ರಿಯೆಯನ್ನು ಹಾಳುಗೆಡವಲು ಇದೇ ವಲಯದಲ್ಲಿರುವವರು ಪ್ರಯತ್ನಿಸುತ್ತಿದ್ದಾರೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮುಈದ್ ಯೂಸುಫ್ ಆರೋಪಿಸಿದ್ದಾರೆ. ಅದೇ ವೇಳೆ, ‘‘ಆಕ್ರಮಿತ ಪ್ರದೇಶದಲ್ಲಿರುವ ಜನರ ಮೇಲೆ ಸರಕಾರಿ ಪ್ರಾಯೋಜಿತ ಭಯೋತ್ಪಾದನೆ ನಡೆಯುತ್ತಿದೆ’’ ಎಂಬುದಾಗಿಯೂ ಅವರು ಆರೋಪಿಸಿದದಾರೆ.

‌ಅವರು ಭಾರತವನ್ನು ಪರೋಕ್ಷವಾಗಿ ಗುರಿಯಾಗಿಸಿ ಈ ಆರೋಪ ಮಾಡಿದ್ದಾರೆ ಎನ್ನಲಾಗಿದೆ.

ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ಬುಧವಾರ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ)ಯ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಮಾತನಾಡಿದ ಯೂಸುಫ್ ಈ ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸುವುದು ವಲಯದ ಅತ್ಯಂತ ತುರ್ತಿನ ಆದ್ಯತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News