ಮಿಝೋರಾಂನಲ್ಲಿ ಹಂದಿಜ್ವರ ವ್ಯಾಪಕ

Update: 2021-07-05 05:08 GMT

ಐಜ್ವಾಲ್: ಮಣಿಪುರದ ಹನ್ನೊಂದು ಜಿಲ್ಲೆಗಳ ಪೈಕಿ 10 ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಂದಿಜ್ವರ ಹರಡಿದ್ದು, ಮೂರು ತಿಂಗಳಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಹಂದಿಗಳು ಬಲಿಯಾಗಿವೆ ಎಂದು ಪಶು ಸಂಗೋಪನೆ ಮತ್ತು ಪಶುಪಾಲನಾ ವಿಜ್ಞಾನ ಇಲಾಖೆ ಪ್ರಕಟಿಸಿದೆ.

ಈ ಸೋಂಕಿನಿಂದ 10 ಜಿಲ್ಲೆಗಳ ಕನಿಷ್ಠ 152 ಗ್ರಾಮಗಳು ಬಾಧಿತವಾಗಿದ್ದು, 36.68 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳಿವೆ.

ಹಂದಿಜ್ವರ ಪೀಡಿತ ಪ್ರದೇಶ ಹೊರತುಪಡಿಸಿದಂತೆ ಇತರ ಕಡೆಗಳಲ್ಲಿ 699 ಹಂದಿಗಳ ಅಸಹಜ ಸಾವು ವರದಿಯಾಗಿದೆ ಎಂದು ಪ್ರಕಟಣೆ ಹೇಳಿದೆ.

ಈ ರೋಗ ಹರಡದಂತೆ ತಡೆಯಲು 1078 ಹಂದಿಗಳನ್ನು ಕೊಲ್ಲಲಾಗಿದೆ. ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಿರುವ ಮಿಝೋರಾಂನ ಲುಂಗ್ಲೀ ಜಿಲ್ಲೆಯಲ್ಲಿ ಮೊದಲ ಹಂದಿಜ್ವರ ಪ್ರಕರಣ ಮಾರ್ಚ್ 21ರಂದು ಕಾಣಿಸಿಕೊಂಡಿತ್ತು. ಈಗ ಲುಂಗ್ಲೀ ಜಿಲ್ಲೆಯಲ್ಲಿ ಪ್ರಕರಣ ಇಳಿಮುಖವಾಗಿದ್ದರೂ ಐಜ್ವಾಲ್ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 3454 ಹಂದಿಗಳು ಬಲಿಯಾಗಿವೆ ಎಂದು ಜಂಟಿ ನಿರ್ದೇಶಕ ಡಾ. ಲಾಲ್‌ ಮಿಂಗ್ಟಾನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News