ಪ್ಲಾಟ್‍ಫಾರ್ಮ್ ನಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದ ತಾಯಿಯ ಬಳಿ ಪೊಲೀಸರನ್ನು ಕರೆದೊಯ್ದ ಎರಡು ವರ್ಷದ ಹೆಣ್ಣು ಮಗು

Update: 2021-07-05 08:01 GMT
Photo: timesofindia

ಬರೇಲಿ: ಸರಿಯಾಗಿ ನಡೆದಾಡಲೂ ಕಷ್ಟಪಡುತ್ತಿದ್ದ ಎರಡು ವರ್ಷದ ಹೆಣ್ಣು ಮಗುವೊಬ್ಬಳು ಮೊರಾದಾಬಾದ್ ರೈಲ್ವೆ ಪ್ಲಾಟ್‍ಫಾರ್ಮ್‍ನಲ್ಲಿ ತನ್ನ ತಾಯಿ  ತನ್ನ ಆರು ತಿಂಗಳ ಪುಟ್ಟ ತಮ್ಮನ ಬಳಿ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ಗಮನಿಸಿ ಏನು ಮಾಡುವುದೆಂದು ತೋಚದೆ ಕೆಲ ಮೀಟರುಗಳಷ್ಟು ದೂರವಿದ್ದ ಇನ್ನೊಂದು ಪ್ಲಾಟ್‍ಫಾರ್ಮ್‍ಗೆ ತಲುಪಿದ್ದಳು ಎನ್ನಲಾಗಿದೆ. 

ಅಲ್ಲಿದ್ದ ಆರ್‍ಪಿಎಫ್ ಜವಾನರ ಬಳಿ ಏನನ್ನೋ ಹೇಳಲು ಯತ್ನಿಸಿದಾಗ ಏನೋ ತಪ್ಪು ನಡೆದಿದೆ ಎಂದು ಸಂಶಯಗೊಂಡ ಪೊಲೀಸರು ಆಕೆಯನ್ನೇ ಹಿಂಬಾಲಿಸಿದಾಗ ಆಕೆ ತನ್ನ ತಾಯಿಯ ಬಳಿಗೆ ಕರೆದುಕೊಂಡು ಹೋದಳು. ಪೊಲೀಸರು ತಕ್ಷಣ ಅಂಬ್ಯುಲೆನ್ಸ್ ಕರೆಸಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಡ ಕುಟುಂಬದ ಗುರುತು ಇನ್ನಷ್ಟೇ ತಿಳಿದು ಬರಬೇಕಿದೆ. ಸುಮಾರು 30ರ ಅಸುಪಾಸಿನ ಮಹಿಳೆಗೆ ಪ್ರಜ್ಞೆ ಬಂದ ನಂತರವಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News