ವಿದ್ಯಾರ್ಥಿಗಳಿಗೆ 2 ಡೋಸ್ ಲಸಿಕೆ ನೀಡದೆ ಭೌತಿಕ ತರಗತಿ ಬೇಡ: ಎಐಡಿಎಸ್‍ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್

Update: 2021-07-07 14:07 GMT

ಬೆಂಗಳೂರು, ಜು.7: ಕೋವಿಡ್ ಲಸಿಕೆಯನ್ನು ಎರಡು ಡೋಸ್ ನೀಡಿದ ಬಳಿಕವಷ್ಟೆ ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಪ್ರಾರಂಭಿಸಬೇಕು ಹಾಗೂ ಹಿಂದಿನ ಸೆಮಿಸ್ಟರ್(1, 3 ಹಾಗೂ 5) ಪರೀಕ್ಷೆಗಳನ್ನು ನಡೆಸಬಾರದೆಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‍ಒ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಎಐಡಿಎಸ್‍ಒ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸುಮಾರು ಎರಡು-ಮೂರು ವಾರಗಳಿಂದ ರಾಜ್ಯದ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳ ಹಿಂದಿನ ಸೆಮಿಸ್ಟರ್(1 3 ಹಾಗೂ 5) ಪರೀಕ್ಷೆಗಳನ್ನು ನಡೆಸಬಾರದೆಂದು ವಿದ್ಯಾರ್ಥಿ, ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳು ರಾಜ್ಯಾದ್ಯಂತ ಸಹಿ ಸಂಗ್ರಹದಲ್ಲಿ ಭಾಗಿಗಳಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಶಿಕ್ಷಣ ತಜ್ಞರಾದ ಅಪ್ಪಮಪ್ರಭು ಬೆಟ್ಟದೂರು, ವಿಶ್ರಾಂತ ಕುಲಪತಿ ಡಾ.ಎಂ.ವಿ.ನಾಡಕರ್ಣಿ, ಡಾ.ಎಂ.ಎಸದ್.ತಿಮ್ಮಪ್ಪ, ಡಾ.ಆರ್.ಎನ್.ಶ್ರೀನಿವಾಸ ಗೌಡ, ಹಿರಿಯ ಲೇಖಕ ಪ್ರೊ.ಪಿ.ವಿ.ನಾರಾಐಯಣ, ಶಿಕ್ಷಣ ತಜ್ಞರಾದ ರಾಜೇಂದ್ರ ಚೆನ್ನಿ, ಪ್ರೊ.ಚಂದ್ರ ಪೂಜಾರಿ ಮತ್ತಿತರರು ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News