ಪೊಲೀಸ್ ಹಿಂಸೆಯನ್ನು ಖಂಡಿಸಿ ಫೆಲೆಸ್ತೀನ್ ಪತ್ರಕರ್ತರಿಂದ ಪ್ರತಿಭಟನೆ

Update: 2021-07-07 17:09 GMT
pjhoto:twitter/@arabnews

ಅಮ್ಮಾನ್, ಜು. 7: ತಮ್ಮ ವೃತ್ತಿಗೆ ರಕ್ಷಣೆ ನೀಡಲು ಫೆಲೆಸ್ತೀನ್ನ ಭದ್ರತಾ ವ್ಯವಸ್ಥೆ ವಿಫಲವಾಗಿದೆ ಎಂದು ಆರೋಪಿಸಿ ಫೆಲೆಸ್ತೀನ್ ಪತ್ರಕರ್ತರು ಮಂಗಳವಾರ ಒಂದು ಗಂಟೆ ಪ್ರತಿಭಟನೆ ನಡೆಸಿದರು.

‌ಹೆಚ್ಚಿನ ರೇಡಿಯೊ, ಆನ್ಲೈನ್ ಮತ್ತು ಫ್ರೀಲಾನ್ಸ್ ಪತ್ರಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು ಎಂದು ಫೆಲೆಸ್ತೀನಿಯನ್ ಜರ್ನಲಿಸ್ಟ್ಸ್ ಸಿಂಡಿಕೇಟ್ನ ಸದಸ್ಯ ಉಮರ್ ನಝ್ಝ್ಲ್ ‘ಅರಬ್ ನ್ಯೂಸ್’ಗೆ ತಿಳಿಸಿದರು.

‘‘ನಿರಂತರ ದಾಳಿಗಳು ಮತ್ತು ನಿರ್ಬಂಧಗಳನ್ನು ಫೆಲೆಸ್ತೀನಿಯನ್ ಪತ್ರಕರ್ತರು ಒಪ್ಪಿಕೊಳ್ಳುವುದಿಲ್ಲ ಎನ್ನುವುದನ್ನು ತಿಳಿಸುವುದಕ್ಕಾಗಿ ಅವರು ಒಂದು ಗಂಟೆ ಕೆಲಸ ನಿಲ್ಲಿಸಿದರು. ಅವರ ಉದ್ದೇಶ ನಮ್ಮ ಬಾಯಿ ಮುಚ್ಚಿಸುವುದು. ಇದು ನಾವು ಕೆಲಸ ಮಾಡದಂತೆ ನಮ್ಮನ್ನು ತಡೆಯುತ್ತದೆ ಎಂಬುದಾಗಿ ಅವರು ಭಾವಿಸಿದ್ದಾರೆ. ಆದರೆ ಅವರು ತಪ್ಪು ತಿಳಿದುಕೊಂಡಿದ್ದಾರೆ’’ ಎಂದು ಅವರು ಹೇಳಿದರು.

ಸೋಮವಾರ ನಡೆದ ಆರು ಪತ್ರಕರ್ತರ ಬಂಧನವನ್ನು ಸಿಂಡಿಕೇಟ್ ಖಂಡಿಸಿದೆ. ಇದು ಪ್ರಧಾನಿ ನೀಡಿರುವ ಭರವಸೆಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News