ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ 3ನೇ ಅಲೆ ತಡೆಗೆ ಮಕ್ಕಳ ತಜ್ಞರ ಸಮಿತಿ ರಚನೆ

Update: 2021-07-08 12:49 GMT

ಬೆಂಗಳೂರು, ಜು.8: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಮೂರನೇ ಅಲೆ ತಡೆಯುವುದು ಹಾಗೂ ಮಕ್ಕಳ ಮೇಲೆ ಯಾವುದೇ ಗಂಭೀರ ಪರಿಣಾಮ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಕ್ಕಳ ತಜ್ಞರ ಸಮಿತಿ ರಚಿಸಿ ಆದೇಶಿಸಲಾಗಿದೆ.

ತಜ್ಞ ವೈದ್ಯರ ಸಮಿತಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅಧ್ಯಕ್ಷರಾದರೆ, ವಿಶೇಷ ಆಯುಕ್ತ (ಆರೋಗ್ಯ) ಕಾರ್ಯದರ್ಶಿ ಆಗಿದ್ದಾರೆ. ಉಳಿದಂತೆ ಒಟ್ಟು ಹನ್ನೆರಡು ನುರಿತ ಮಕ್ಕಳ ಆರೋಗ್ಯ ತಜ್ಞರನ್ನು ಈ ಸಮಿತಿ ಸದಸ್ಯರಾಗಿ ನೇಮಿಸಲಾಗಿದೆ.

ಯಾರಾರು ಸದಸ್ಯರು?: ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಸಂಜಯ್, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್, ರೈನ್‍ಬೊ ಮಕ್ಕಳ ಆಸ್ಪತ್ರೆ ಲೀಡ್ ಪೀಡಿಯಾಟ್ರಿಕ್ಸ್ ಇಂಟೆನ್ಸಿವಿಸ್ಟ್ ಡಾ.ರಕ್ಷಯ್ ಶೆಟ್ಟಿ, ಮಣಿಪಾಲ್ ಆಸ್ಪತ್ರೆ ಮಕ್ಕಳ ತಜ್ಞರ ಸಲಹೆಗಾರ ಡಾ. ನರೇಶ್ ಪಿ.

ಕೊಲಂಬಿಯಾ ಆಸ್ಪತ್ರೆ ಶಿಶು ತಜ್ಞ ಡಾ.ವಿಶ್ವನಾಥ್ ಕಾಮೋಜಿ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ. ವಿಜೇಂದ್ರ, ಬಿಬಿಎಂಪಿ (ಕ್ಲಿನಿಕಲ್) ಮುಖ್ಯ ಆರೋಗ್ಯಾಧಿಕಾರಿ ಡಾ. ನಿರ್ಮಲಾ ಬುಗ್ಗಿ, ಮಕ್ಕಳ ತಜ್ಞರು, ಬಿಬಿಎಂಪಿ ಮಕ್ಕಳ ಆರೋಗ್ಯ ನೋಡಲ್ ಅಧಿಕಾರಿ ಡಾ. ಆನಂದ್, ಮಕ್ಕಳ ತಜ್ಞೆ ಹಾಗೂ ಆರೋಗ್ಯಾಧಿಕಾರಿ ಬಿಬಿಎಂಪಿ ಡಾ.ಸರಸ್ವತಿ,  ಶ್ರೀರಾಂಪುರ ರೆಫರಲ್ ಆಸ್ಪತ್ರೆ ಮಕ್ಕಳ ತಜ್ಞೆ ಡಾ. ಭಾರತಿ, ಹಲಸೂರು ರೆಫರಲ್ ಆಸ್ಪತ್ರೆ ಮಕ್ಕಳ ತಜ್ಞರು ಡಾ. ರಮೇಶ್ ಇವರು ಸದಸ್ಯರಾಗಿದ್ದಾರೆಂದು ಪಾಲಿಕೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News