ಚಾಮರಾಜನಗರ: ಗಂಡು ಹುಲಿ ಸಾವು

Update: 2021-07-09 19:12 GMT

ಚಾಮರಾಜನಗರ:  ಜಿಲ್ಲೆಯ ಬಂಡೀಪುರ ವ್ಯಾಪ್ತಿಯ ಗುಂಡ್ರೆ ವಲಯದ ನಾಯಳ್ಳ ಗಸ್ತಿನಲ್ಲಿ ಗಂಡು ಹುಲಿಯೊಂದ ಮೃತಪಟಿದೆ.

ಬೇರೊಂಂದು ಹುಲಿಯೊಡನೆ ಕಾದಾಡಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆಂದು ಕರೆದೊಯ್ಯುವ ವೇಳೆ ಹುಲಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಹುಲಿಗೆ 4ರಿಂದ 5 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ. 

ಜು.8ರಂದು ಎಡಗಾಲು ಮತ್ತು ಕಣ್ಣಿಗೆ ಗಾಯವಾಗಿದ್ದ ಹುಲಿಯ ಚಲನ ವಲನವನ್ನು ಗುಂಡ್ರೆ ವಲಯದ ಸಿಬ್ಬಂದಿ ಹಾಗೂ ವಿಶೇಷ ಹುಲಿ ಸಂರಕ್ಷಣ ದಳದ ಸಿಬ್ಬಂದಿ ಗಮನಿಸಿ, ಬಂಡೀಪುರ ಹುಲಿಯೋಜನೆ ನಿರ್ದೇಶಕರ ಗಮನಕ್ಕೆ ತಂದಿದ್ದರು. ಸಿಎಫ್ ಅವರ ಮಾರ್ಗದರ್ಶನದಲ್ಲಿ ಹುಲಿಯ ಸೆರೆಗಾಗಿ ಅಲ್ಲಿ ಬೋನ್ ಇರಿಸಲಾಗಿತ್ತು. ಆದರೆ ಹುಲಿ ಬೋನಿಗೆ ಬೀಳದ ಕಾರಣ ಇಂದು ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಅವರು ಡಾಟ್ ಮಾಡಿ ಹುಲಿಯನ್ನು ಸೆರೆಹಿಡಿದಿದ್ದಾರೆ.
 
ದೆಹಲಿಯ ಎನ್ ಸಿಟಿಎ ಅವರ ಮಾರ್ಗ ಸೂಚಿಯಂತೆ ಹುಲಿಯ ಶುಶ್ರೂಷಣೆಗಾಗಿ ಪ್ರಥಮ ಚಿಕಿತ್ಸೆ ನಡೆಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವನ್ಯಜೀವಿ ಪರಿಪಾಲಕರ ಆದೇಶದಂತೆ ಹೆಚ್ಚಿನ ಚಿಕಿತ್ಸೆಗಾಗಿ ಹುಲಿಯನ್ನು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಗೆ ಕಳುಹಿಸಿಕೊಡಲಾಗಿತ್ತು. ಚಿಕಿತ್ಸೆಗೆಂದು ಕರೆದೊಯ್ಯುವ ವೇಳೆ ಹುಲಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ  ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News