ಹಾಸನ: ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

Update: 2021-07-11 11:50 GMT

ಹಾಸನ,ಜು.11: ವನಮಹೋತ್ಸವ ದಿನಾಚರಣೆ ಅಂಗವಾಗಿ ನಗರದ ಹೊಸ ಬಸ್ ನಿಲ್ದಾಣ ಎದುರು ಹೌಸಿಂಗ್ ಬೋರ್ಡಿನಲ್ಲಿರುವ ಪಾರ್ಕ್‍ನಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷರಾದ ಮೋಹನ್ ಕುಮಾರ್ ಮತ್ತು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ರೂಪ ಆನಂದ್ ಕುಮಾರ್ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಹಸಿರುಭೂಮಿ ಪ್ರತಿಷ್ಠಾನ, ಲಯನ್ಸ್ ಕ್ಲಬ್, ಚನ್ನಪಟ್ಟಣ ಕೆರೆ ಜಾಗೃತಿ ಸಮಿತಿ, ವಿನಾಯಕ ಸಮಿತಿ, ಕೆ.ಹಚ್.ಬಿ. ಬಡಾವಣೆ ನಿವಾಸಿಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿರುವ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಿರುವುದು ಉತ್ತಮವಾಗಿದೆ. ಚನ್ನಪಟ್ಟಣ ಭಾಗದಲ್ಲಿ ಅನೈತಿಕ ಚಟುವಟಿಕೆಗಳು ಕೂಡ ನಡೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕುವಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ಪರಿಸರ ಎಂಬುದು ಪ್ರತಿ ಮನೆ ಮನೆಯಲ್ಲೂ ಜಾಗೃತಿ ಬಂದು ಹೆಚ್ಚು ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು. ಇಂದು ಕೊರೋನಾ ಎಂಬ ಮಹಾಮಾರಿ ಆವರಿಸಿ ಸಾವು-ನೋವುಗಳನ್ನು ಕಾಣುತ್ತಿದ್ದೇವೆ. ಇದರ ನಿಯಂತ್ರಣಕ್ಕಾಗಿ ಪರಿಸರವನ್ನು ನಾವುಗಳು ಸಂರಕ್ಷಿಸಬೇಕು. ಸ್ವಚ್ಛತೆ ಎಂಬುದು ಕೂಡ ಪ್ರತಿಯೊಬ್ಬರಲ್ಲೂ ಬಂದರೇ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಇದೆ ವೇಳೆ ಸಲಹೆ ನೀಡಿದರು.

ಈಸಂದರ್ಭದಲ್ಲಿ ಚನ್ನಪಟ್ಟಣ ಕೆರೆ ಪರಿಸರ ಜಾಗೃತಿ ಸಮಿತಿಯ ಅಧ್ಯಕ್ಷರು ಮತ್ತು ಲಯನ್ಸ್ ಸೇವಾಸಂಸ್ಥೆ ಮಾಜಿ ಅಧ್ಯಕ್ಷರಾದ ಎಸ್.ಪಿ. ಪ್ರಕಾಶ್, ಕಾರ್ಯದರ್ಶಿ ತೋಫಿಕ್, ಖಜಾಂಚಿ ಭವಾನಿ, ಹಸಿರುಭೂಮಿ ಪ್ರತಿಷ್ಠಾನದ ಟ್ರಸ್ಟಿಗಳಾದ ಸುಬ್ಬಸ್ವಾಮಿ, ಅಪ್ಪಾಜಿಗೌಡ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರೇಮ ಸತ್ಯನಾರಾಯಣ್, ಜರ್ಸಿ ಹೆಚ್.ಆರ್. ಚಂದ್ರೇಗೌಡ, ಚನ್ನಪಟ್ಟಣ ಕೆರೆ ಪರಿಸರ ಜಾಗೃತಿ ಸಮಿತಿ ಉಪಾಧ್ಯಕ್ಷ ಬಿ.ಆರ್. ಪರಮೇಶ್, ಕಾರ್ಯಾಧ್ಯಕ್ಷ ಎ.ಜಿ. ದೇವರಾಜೇಗೌಡ, ರಘು ಶೆಟ್ಟಿಹಳ್ಳಿ, ಶಂಕರ್, ರವಿ, ಹೇಮಂತ್, ಚಂದ್ರು ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News