ಜನಸಂಖ್ಯಾ ಸ್ಫೋಟ ನಿಲ್ಲಿಸೋಣ: ಸಚಿವ ಡಾ. ಸುಧಾಕರ್

Update: 2021-07-11 15:07 GMT

ಬೆಂಗಳೂರು, ಜು.11: ನಮಗೆ ಇರುವುದೊಂದೇ ಭೂಮಿ. ಹೀಗಾಗಿ ನಿಯಂತ್ರಣವಿಲ್ಲದ ಜನಸಂಖ್ಯಾ ಸ್ಫೋಟ ನಿಲ್ಲಿಸೋಣವೆಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮೊದಲ ನೂರು ಕೋಟಿ ತಲುಪಲು ಸಾವಿರಾರು ವರ್ಷ ಬೇಕಾಯಿತು. ನೂರರಿಂದ 700 ಕೋಟಿ ತಲುಪಲು ಕೇವಲ 200 ವರ್ಷಗಳು ಬೇಕಾಯಿತು. ಪ್ರಪಂಚದ ಒಟ್ಟು ಜನಸಂಖ್ಯೆಯು 800 ಕೋಟಿಯತ್ತ ಸಾಗಿದೆಯೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ಚೀನಾ ಹಾಗೂ ಭಾರತದಲ್ಲಿ ಕ್ರಮವಾಗಿ 140 ಕೋಟಿ ಮತ್ತು 130 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇದ್ದು, ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಮೊದಲೆರೆಡು ಸ್ಥಾನಗಳಲ್ಲಿವೆ. ಈ ಜನಸಂಖ್ಯಾ ಸ್ಪೋಟವನ್ನು ನಿಯಂತ್ರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News