ಸಿಸಿಇ ಮೌಲ್ಯಾಂಕನ ಪದ್ಧತಿ ಪಿಯುವರೆಗೆ ವಿಸ್ತರಿಸಿ: ಲೋಕೇಶ್ ತಾಳಿಕಟ್ಟೆ

Update: 2021-07-11 15:26 GMT

ಬೆಂಗಳೂರು, ಜು.11: ಸಿಸಿಇ(ನಿರಂತರ ಕಲಿಕಾ ಮೌಲ್ಯಾಂಕನ)ಯನ್ನು ಪಿಯು ಪಠ್ಯಕ್ರಮಕ್ಕೂ ವಿಸ್ತರಿಸುವ ಮೂಲಕ ವಸ್ತುನಿಷ್ಠ ರೀತಿಯಲ್ಲಿ ಫಲಿತಾಂಶ ನೀಡಲು ಅನುಕೂಲ ಕಲ್ಪಿಸಬೇಕೆಂದು ಕರ್ನಾಟಕ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಬಿಎಸ್ಸಿ, ಐಸಿಎಸ್ಸಿ ಬೋರ್ಡ್‍ಗಳು ಸಿಸಿಇ ಮೌಲ್ಯಂಕನ ಪದ್ಧತಿ ಹಾಗೂ ಪಠ್ಯಕ್ರಮ ಹೊಂದಿದ್ದರಿಂದ ಅತ್ಯಂತ ಪಾರದರ್ಶಕವಾಗಿ ಹಾಗೂ ವಸ್ತುನಿಷ್ಟ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿದೆ. ಆದರೆ, ರಾಜ್ಯದಲ್ಲಿ ಎಸೆಸೆಲ್ಸಿವರೆಗೆ ಮಾತ್ರ ಸಿಸಿಇ ಪದ್ಧತಿಯಿದೆ. ಇದನ್ನು ಪಿಯುವರೆಗೆ ವಿಸ್ತರಿಸಬೇಕೆಂದು ತಿಳಿಸಿದ್ದಾರೆ.

ಕೋವಿಡ್‍ ನಿಂದಾಗಿ ಭೌತಿಕ ತರಗತಿಗಳು ನಗರ ಪ್ರದೇಶದಲ್ಲಿ ಸಾಧ್ಯವಾಗದಿದ್ದರೂ ಹಳ್ಳಿಯ ಭಾಗಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿ ತರಗತಿಗಳನ್ನು ನಡೆಸುವ ಮೂಲಕ ಕಲಿಕೆ ಹಾಗೂ ಮೌಲ್ಯಂಕನಕ್ಕೆ ವಿದ್ಯಾರ್ಥಿಗಳನ್ನು ಒಳಪಡಿಸಬೇಕೆಂದು ಅವರು ತಿಳಿಸಿದ್ದಾರೆ.
ನಿರಂತರ ಮೌಲ್ಯಾಂಕನ ಪದ್ಧತಿಯನ್ನು ಆನ್‍ಲೈನ್ ಅಥವಾ ಭೌತಿಕ ತರಗತಿಗಳಲ್ಲಿಯು ಚಾಚು ತಪ್ಪದೆ ನಡೆಸುವಂತಹ ಶೈಕ್ಷಣಿಕ ಕ್ಯಾಲೆಂಡರ್ ನ್ನು ತಕ್ಷಣ ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News