ಆಡಳಿತ ಸುಧಾರಣೆಗಳ ಕುರಿತು ಸಂಪುಟ ಉಪಸಮಿತಿ ಸಭೆ: ಸಚಿವ ಆರ್.ಅಶೋಕ್

Update: 2021-07-15 16:08 GMT

ಬೆಂಗಳೂರು, ಜು. 15: ನಾಲ್ಕು ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ರದ್ದುಗೊಳಿಸಿ, ಬೆಂಗಳೂರಿನಲ್ಲಿ ಪ್ರಾದೇಶಿಕ ಆಯುಕ್ತರನ್ನು ಸ್ಥಾಪಿಸುವ ಸಾಧ್ಯತೆಯ ಬಗ್ಗೆ ಆಡಳಿತ ಸುಧಾರಣೆಗಳ ಕುರಿತು ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿಂದು ಸಭೆ ನಡೆಸಲಾಯಿತು. 

ಗುರುವಾರ ವಿಧಾನಸೌಧದಲ್ಲಿ ಸಮಾಲೋಚನೆ ನಡೆಸಿದ ಸಚಿವ ಅಶೋಕ್, ನೆರೆಹೊರೆಯ ಯೋಜನಾ ಅಧಿಕಾರಿಗಳನ್ನು ಬಿಎಂಆರ್  ಡಿಎಯೊಂದಿಗೆ ವಿಲೀನಗೊಳಿಸುವುದು, ಕಂದಾಯ ಇಲಾಖೆಯ ಪಿಂಚಣಿ ಯೋಜನೆಯಡಿ ವಿವಿಧ ಇಲಾಖೆಗಳ ಪಿಂಚಣಿ ಯೋಜನೆಗಳನ್ನು ತರುವುದು, ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳ ಹುದ್ದೆಗಳನ್ನು ರದ್ದುಪಡಿಸುವುದು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಹಾಗೂ ಕುಡಿಯುವ ನೀರಿನ ಎಂಜಿನಿಯರಿಂಗ್ ವಿಭಾಗಳನ್ನು ವಿಲೀನಗೊಳಿಸುವುದು ಸೇರಿವೆ ಎಂದು ತಿಳಿಸಿದರು.

ಜಾಗೃತೆಯಿಂದ ಇದ್ದರೆ ಮಾತ್ರ ಕೋವಿಡ್ ದೂರಮಾಡಲು ಸಾಧ್ಯ: ಕಂದಾಯ ಸಚಿವ ಆರ್.ಅಶೋಕ್, ಕೋವಿಡ್ ವಿರುದ್ಧ ಹೋರಾಡಲು ಜಾಗೃತಿ ಬಹಳ ಮುಖ್ಯ. ಬನಶಂಕರಿ 2ನೆ ಹಂತದಲ್ಲಿ ಬೀದಿಬದಿ ವ್ಯಾಪಾರಿಗಳು, ಪೈಂಟರ್‍ಗಳು, ಮನೆಕೆಲಸದವರು, ಕ್ಯಾಬ್ ಡ್ರೈವರ್‍ಗಳು, ಸೆಕ್ಯೂರಿಟಿಗಾರ್ಡ್‍ಗಳು ಸೇರಿ ಸುಮಾರು 500 ಜನರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದರು.

ಕಾರ್ಯಕ್ರಮದ ನಂತರ ಮಾತನಾಡಿದ ಅವರು, `ನಾವು 30 ದಿನಗಳಿಂದ ವಿವಿಧ ವರ್ಗದ ಜನರಿಗೆ ಕಿಟ್‍ಗಳನ್ನು ವಿತರಿಸುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಸ್ವಂತ ಉದ್ಯಮ ನಡೆಸಲು ಸುಮಾರು 20 ಕೋಟಿ ರೂ.ಹಣವನ್ನು ಬಡ್ಡಿ ಇಲ್ಲದೆ ಸಾಲ ಕೊಟ್ಟಿದ್ದೇವೆ, ವಿಶೇಷಚೇತನರಿಗೆ ವಾಹನ ನೀಡಿದ್ದೇವೆ. ಮೋದಿಯವರು ಉಚಿತವಾಗಿ ವಾಕ್ಸಿನ್ ನೀಡುತ್ತಿದ್ದಾರೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ನಾವು ಮಾಡುತ್ತೇವೆ, ಎಲ್ಲರು ಕಡ್ಡಾಯವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಬೇಕು, ಯಾವುದೇ ಭಯ ಬೇಡ. ನಮ್ಮ ಜನರಿಗೆ ತೊಂದರೆ ಆಗಬಾರದು ಎನ್ನುವುದು ನನ್ನ ಉದ್ದೇಶ. ಯಾವಾಗಲೂ ಜನರೊಂದಿಗೆ ನಿಲ್ಲುವುದು ನನ್ನ ಏಕೈಕ ಗುರಿ' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News