ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕೆ ಇಲ್ಲ: ಡಿ.ವಿ.ಸದಾನಂದಗೌಡ

Update: 2021-07-21 11:08 GMT

ಬೆಂಗಳೂರು, ಜು. 21: `ರಾಜ್ಯದ ಜನರ ಬೆಂಬಲ ಹಾಗೂ ಪ್ರಧಾನಿ ಮೋದಿಯವರ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗಿನ ಸಾಮರಸ್ಯ ನೋಡಿದರೆ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದೆನಿಸುತ್ತದೆ. ಆದರೆ, ಮುಂದಿನದು ಬಿಜೆಪಿ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಬಿಟ್ಟಿದ್ದು' ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ರಾಜಕಾರಣ ಎಂದರೆ ದಿನಕ್ಕೊಂದು ತಿರುವುಗಳು ಸಣ್ಣಪುಟ್ಟ ವ್ಯತ್ಯಾಸಗಳು ಸಹಜ. ನನಗೆ ತಿಳಿದ ಮಟ್ಟಿಗೆ ದಿಲ್ಲಿಗೆ ತೆರಳಿದ್ದ ಸಿಎಂ, ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯದ ವಿದ್ಯಮಾನಗಳನ್ನು ತಿಳಿಸಿದ್ದಾರೆ. ಕೋವಿಡ್ ವೇಳೆ ಸರಕಾರ ಇಟ್ಟ ದಿಟ್ಟ ಹೆಜ್ಜೆ, ಅಭಿವೃದ್ದಿ ಕಾರ್ಯಗಳಲ್ಲಿ ನಿರತವಾಗಿದ್ದ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಹೀಗಾಗಿ ಸಿಎಂ ಬದಲಾವಣೆ ಸಂದರ್ಭ ಇಲ್ಲ ಎಂದರು.

`ಸಿಎಂ ಬಿಎಸ್‍ವೈ ಒಳ್ಳೆ ಕೆಲಸ ಮಾಡಿದಾಗ ಮಠ-ಮಂದಿರ ಹಾಗೂ ಸಾರ್ವಜನಿಕರು ಬೆಂಬಲ ಕೊಟ್ಟೆ ಕೊಡುತ್ತಾರೆ. ಅದರ ಪ್ರತಿ ಫಲವೇ ಯಡಿಯೂರಪ್ಪ ಅವರ ಪರ ಬಂದಿರುವ ಸಹಾಯ ಹಸ್ತಗಳು ಎಂದ ಅವರು, ನಳಿನ್ ಕುಮಾರ್ ಕಟೀಲ್ ಅವರ ಆಡಿಯೋ ವೈರಲ್ ಕುರಿತಂತೆ ಕೇಳಿದ ಪ್ರಶ್ನೆಗೆ ಸ್ವತಃ ಅವರೇ ಆ ಆಡಿಯೋ ನನ್ನದಲ್ಲ ಎಂದು ಹೇಳಿರುವಾಗ ವೃಥಾ ಚರ್ಚೆ ಏಕೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News