ರಾಜ್ಯದಲ್ಲಿಂದು 1,639 ಮಂದಿಗೆ ಕೋವಿಡ್ ದೃಢ, 36 ಮಂದಿ ಸಾವು

Update: 2021-07-21 13:53 GMT

ಬೆಂಗಳೂರು, ಜು. 21: `ರಾಜ್ಯದಲ್ಲಿ ಬುಧವಾರ ಒಟ್ಟು 1,639 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 36 ಮಂದಿ ಅಸುನೀಗಿದ್ದು, 2,214 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಒಟ್ಟು 28,88,341ಕ್ಕೆ ತಲುಪಿದ್ದು, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 36,262ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರ- 419, ದಕ್ಷಿಣ ಕನ್ನಡ-150, ಹಾಸನ-141 ಕೊಡಗು-63, ಮೈಸೂರು-160, ಉಡುಪಿ-104, ಕೋಲಾರ-35, ಬೆಳಗಾವಿ-61, ಚಿಕ್ಕಮಗಳೂರು-92 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟಾರೆ 1,639 ಮಂದಿ ಹೊಸದಾಗಿ ಸೋಂಕಿತರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಲೆಟಿನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News