ಮಡಿಕೇರಿ: ಸೈನಿಕ ಕುಟುಂಬದ ಮೇಲೆ ಹಲ್ಲೆ ಆರೋಪ; ಮೂವರ ಬಂಧನ

Update: 2021-07-28 09:50 GMT

ಮಡಿಕೇರಿ ಜು.27 : ಮಡಿಕೇರಿ ಹೊರ ವಲಯದಲ್ಲಿ ರವಿವಾರ ರಾತ್ರಿ ಯೋಧ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ ನಡೆದ ಆರೋಪದಲ್ಲಿ ಮೂವರನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. 

ಸುಂಟಿಕೊಪ್ಪ ನಿವಾಸಿ  ಇಸಾಕ್ ಖಾನ್, ರಫೀಕ್ ಖಾನ್ ಹಾಗೂ ನಾಸಿರ್ ಎಂಬುವವರೇ ಬಂಧಿತ ಆರೋಪಿಗಳು. ಈ ಹಲ್ಲೆ ಪ್ರಕರಣದಲ್ಲಿ ಯೋಧ ಅಶೋಕ್ ಕುಮಾರ್ ಅವರ ಪತ್ನಿ ಯೋಗಿತ ಹಾಗೂ ತಂದೆ ಪೊನ್ನಪ್ಪ ಅವರಿಗೆ ಗಾಯಗಳಾಗಿತ್ತು. ಅಲ್ಲದೆ ಚಿನ್ನಾಭರಣಗಳನ್ನು ಕಸಿದು ಪರಾರಿಯಾಗಿರುವ ಬಗ್ಗೆ ಆರೋಪಿಸಲಾಗಿತ್ತು. ಪ್ರಕರಣದ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News