ಟೋಕಿಯೋ ಒಲಿಂಪಿಕ್ಸ್:‌ ಐರ್ಲೆಂಡ್‌ ಸೋಲಿನಿಂದಾಗಿ ಕ್ವಾರ್ಟರ್‌ ಫೈನಲ್‌ ಗೇರಿದ ಭಾರತೀಯ ಮಹಿಳಾ ಹಾಕಿ ತಂಡ

Update: 2021-07-31 16:25 GMT

ಟೋಕಿಯೋ: ಗ್ರೇಟ್ ಬ್ರಿಟನ್ ತಂಡವು 2-0 ಗೋಲುಗಳಿಂದ ಐರ್ಲೆಂಡ್ ಮಹಿಳಾ ಹಾಕಿ ತಂಡವನ್ನು ಸೋಲಿಸಿದ ಕಾರಣದಿಂದಾಗಿ ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಕ್ವಾರ್ಟರ್ ಫೈನಲ್‌ ಗೆ ಅರ್ಹತೆ ಪಡೆದಿದೆ.

ಈ ಮೊದಲು ಟೀಂ ಇಂಡಿಯಾ ತನ್ನ ಪೂಲ್ ಎ ಮಹಿಳಾ ಹಾಕಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದ ಗೆಲುವು ಸಾಧಿಸುವ ಮೂಲಕ ತಮ್ಮ ಕ್ವಾರ್ಟರ್‌ ಫೈನಲ್ ಅರ್ಹತೆಯ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ವಂದನಾ ಕಟಾರಿಯಾ ಮೂರು ಗೋಲುಗಳೊಂದಿಗೆ ಮಿಂಚಿದ್ದರು.

ಐರ್ಲೆಂಡ್ ತಂಡ ಸೋತ ಕಾರಣ ಭಾರತವು 41 ವರ್ಷಗಳ ಬಳಿಕ  ಕ್ವಾರ್ಟರ್ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿತು. ಭಾರತೀಯ ಮಹಿಳಾ ತಂಡದ 1980 ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ತಲುಪುವುದರೊಂದಿಗೆ ಶ್ರೇಷ್ಟ ಸಾಧನೆ ಮಾಡಿತ್ತು.ಆದರೆ ನಾಲ್ಕನೆಯ ಸ್ಥಾನದೊಂದಿಗೆ ಗೇಮ್ಸ್ ಅನ್ನು ಕೊನೆಗೊಳಿಸಿತ್ತು.

 ಐರ್ಲೆಂಡ್ ಹಾಗೂ  ದಕ್ಷಿಣ ಆಫ್ರಿಕಾ ವಿರುದ್ಧ ಸತತ ಗೆಲುವಿನೊಂದಿಗೆ ಭಾರತವು ತನ್ನ ಎ ಗುಂಪಿನ ಲೀಗ್ ಪ್ರಕ್ರಿಯೆಯನ್ನು ಆರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಮುಗಿಸಿದೆ.

ಸೋಮವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ  ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಪ್ರತಿ ಗುಂಪಿನಿಂದ ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News