ಬಿಎಸ್‍ವೈ ಅವಧಿಯಲ್ಲಿ ನಿಯುಕ್ತಿಗೊಂಡ ಅಧಿಕಾರಿ/ಸಿಬ್ಬಂದಿ ಬಿಡುಗಡೆ

Update: 2021-07-31 15:34 GMT

ಬೆಂಗಳೂರು, ಜು. 31: ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ಅವಧಿಯಲ್ಲಿ ಸಿಎಂ, ಡಿಸಿಎಂ, ಸಚಿವರ ಆಪ್ತ ಶಾಖೆಗಳಲ್ಲಿ ಸ್ಥಳ ನಿಯುಕ್ತಿ, ನಿಯೋಜನೆ, ಒಪ್ಪಂದದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರನ್ನು ಬಿಡುಗಡೆಗೊಳಿಸಲಾಗಿದ್ದು, ಆಗಸ್ಟ್ 2ರ ಪೂರ್ವಾಹ್ನದೊಳಗಾಗಿ ತಮ್ಮ ಮಾತೃ ಇಲಾಖೆಗೆ ಕಾರ್ಯವರದಿ ಮಾಡಿಕೊಳ್ಳತಕ್ಕದ್ದು ಎಂದು ಸೂಚಿಸಲಾಗಿದೆ.

ಕಚೇರಿಗಳಲ್ಲಿ ಪ್ರಸ್ತುತ ಬಾಕಿ ಇರುವ ಎಲ್ಲ ಭೌತಿಕ ಕಡತಗಳನ್ನು ಸ್ವೀಕೃತಿ ಮತ್ತು ಇ-ಆಫೀಸ್ ಕಡತಗಳ ಸ್ವೀಕೃತಿಗಳನ್ನು ಪಡೆಯತಕ್ಕದ್ದು. ಕಚೇರಿ ಉಪಯೋಗಕ್ಕಾಗಿ ಒದಗಿಸಿರುವ ಲೇಖನಿ ಸಾಮಾಗ್ರಿಗಳು, ಗಣಕಯಂತ್ರಗಳು, ಪೀಠೋಪಕರಣಗಳು, ದೂರವಾಣಿ ಹಾಗೂ ಇತ್ಯಾದಿ ಸಾಮಾಗ್ರಿಗಳನ್ನು ಕೂಡಲೇ ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಸ್ವೀಕೃತಿ ಪಡೆಯತಕ್ಕದ್ದು. ಗುರುತಿನಚೀಟಿ ಹಾಗೂ ವಾಹನ ಪಾಸ್ ಇತ್ಯಾದಿ ಪಾಸ್‍ಗಳನ್ನು ಹಿಂದಿರುಗಿಸಬೇಕು ಎಂದು ನಿರ್ದೇಶಿಸಲಾಗಿದೆ.

ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ/ ಸಿಬ್ಬಂದಿ ಆಗಸ್ಟ್ 2ರ ಪೂರ್ವಹ್ನಾದೊಳಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಗಳಿಂದ ಬಿಡುಗಡೆಗೊಳಿಸತಕ್ಕದ್ದು. ಗಣಕಯಂತ್ರ, ಪೀಠೋಪಕರಣಗಳು ಕಳೆದು ಹೋದಲ್ಲಿ ಸಂಬಂಧಪಟ್ಟ ಸಚಿವರ ಆಪ್ತ ಕಾರ್ಯದರ್ಶಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರಕಾರದ ಜಂಟಿ ಕಾರ್ಯದರ್ಶಿ ಅನಂತ ಎನ್.ಕಾಸ್ಕರ್ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News