ಮಹಿಳಾ ಮೀಸಲಾತಿಯಡಿ ಯಾದವ ಸಮಾಜದ ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಲು ಆಗ್ರಹ

Update: 2021-07-31 16:30 GMT

ಕೋಲಾರ,ಜು.30: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರ ಮಂತ್ರಿಮಂಡಲದಲ್ಲಿ ಮಹಿಳಾ ಮೀಸಲಾತಿಯಲ್ಲಿ ಗೊಲ್ಲ(ಯಾದವ) ಸಮುದಾಯದ ಏಕೈಕ ಮಹಿಳಾ ರಾಜಕಾರಣಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರಿಗೆ ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಬೇಕು ಎಂದು ಕೋಲಾರ ತಾಲೂಕು ಯಾದವ ಸಂಘದ ಸಂಘಟನಾ ಕಾರ್ಯದರ್ಶಿ ಶಬರೀಶ್ ಯಾದವ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಸುಮಾರು ವರ್ಷಗಳಿಂದ ರಾಜಕೀಯ ಪಕ್ಷಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ರಾಜಕೀಯ ಪ್ರಾತಿನಿಧ್ಯ ಪಡೆಯಲು ಕಷ್ಟವಾಗಿತ್ತು, ಆ ನಿಟ್ಟಿನಲ್ಲಿ ಸಮಾಜದಲ್ಲಿ ಯಾದವ ಜನಾಂಗದವರು ಪ್ರಜ್ಞಾವಂತರಾಗಿ ಸಂಘಟಿತರಾಗಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಮಾಜಿ ಶಾಸಕ ಎ.ಕೃಷ್ಣಪ್ಪನವರ ಮಗಳಾದ ಪೂರ್ಣಿಮಾ ಶ್ರೀನಿವಾಸ್ ಎರಡು ಬಾರಿ ಬಿಬಿಎಂಪಿ ಸದಸ್ಯರಾಗಿ ಯಶಸ್ವಿ ರಾಜಕಾರಣ ಮಾಡಿದ್ದು, ಇದೀಗ ಹಿರಿಯೂರು ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಕರ್ನಾಟಕ ರಾಜ್ಯದ 40 ಲಕ್ಷ ಯಾದವ ಸಮುದಾಯದ ಹಾಗೂ ಹಿಂದುಳಿದ ಪ್ರವರ್ಗ-1 ರ ಸುಮಾರು 356 ಉಪಜಾತಿಗಳ ಏಕಮಾತ್ರ ನಾಯಕಿಯಾಗಿ ಹೊರಹೊಮ್ಮಿದ್ದು, ಇವರಿಗೆ ಸಚಿವ ಸ್ಥಾನ ನೀಡಿ ಜನ ಸೇವೆ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಯಾದವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣಾಕುಮಾರಿ, ಕೋಲಾರ ರಾಜ್ಯ ಯಾದವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಯಾದವ್, ತಾಲೂಕು ಯಾದವ ಸಂಘದ ಅಧ್ಯಕ್ಷ ಕೆ.ಎಂ.ವೆಂಕಟರವಣಪ್ಪ, ಕೋಲಾರ ತಾಲೂಕು ಯಾದವ ಸಂಘದ ಖಜಾಂಚಿ ಕೆ ಮಂಜುನಾಥ, ಕೆ.ಎನ್.ಪ್ರಶಾಂತ್, ರಮೇಶ್ ಯಾದವ್, ಎಂ.ಮಣಿ, ನಾಮಾಲು ಮಂಜುನಾಥ, ಮುನಿವೆಂಕಟಪ್ಪ, ಮಾಯಂಡೀ ಮನೋಹರ್, ಎನ್ ಕೃಷ್ಣ, ಕೆ.ವಿ.ರಮೇಶ್, ಕೆ.ವಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News