ಯಶವಂತಪುರ-ಶಿವಮೊಗ್ಗ ನಡುವೆ ಮೊತ್ತೊಂದು ರೈಲು ಸಂಚಾರ

Update: 2021-08-03 18:30 GMT

ಬೆಂಗಳೂರು, ಆ.3: ಯಶವಂತಪುರ-ಶಿವಮೊಗ್ಗ ನಡುವೆ ಆ.10ರಿಂದ ಮತ್ತೊಂದು ರೈಲು ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಮಾಹಿತಿ ನೀಡಿದೆ.

ರೈಲು ನಂಬರ್ 07357/07358 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಆ.10ರಿಂದ ಪ್ರತಿದಿನ ಸಂಚಾರ ನಡೆಸಲಿದೆ. ಯಶವಂತಪುರದಿಂದ ಹೊರಡುವ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿ ನಿಲ್ದಾಣದಲ್ಲಿ ನಿಲುಗಡೆಗೊಂಡು ಶಿವಮೊಗ್ಗವನ್ನು ತಲುಪಲಿದೆ. ಶಿವಮೊಗ್ಗದಿಂದ ವಾಪಸ್ ಬರುವಾಗ ಸಹ ಇದೇ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೊಳ್ಳಲಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News