ಸಚಿವ ಸಂಪುಟ ವಿಸ್ತರಣೆ: ಈಡಿಗ ಪ್ರಾತಿನಿಧ್ಯ ಕಡೆಗಣಿಸಿದ ಸರ್ಕಾರ; ಮಲೆನಾಡಿನ ಈಡಿಗ ಸಮುದಾಯ ಅಸಮಾಧಾನ

Update: 2021-08-04 19:08 GMT

ಶಿವಮೊಗ್ಗ, ಆ.4: ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಸಚಿವ ಸಂಪುಟದಲ್ಲಿ ಶಿವಮೊಗ್ಗ ಜಿಲ್ಲೆಯ ಇಬ್ಬರು ಶಾಸಕರು ಮಂತ್ರಿಯಾಗುವ ಭಾಗ್ಯ ಲಭಿಸಿದೆ. ಕೆ.ಎಸ್ ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ನಿರ್ಣಾಯಕವಾಗಿರುವ ಈಡಿಗ ಸಮುದಾಯದ ಪ್ರಾತಿನಿಧ್ಯಕ್ಕೆ ಮಾನ್ಯತೆ ಸಿಕ್ಕದೇ ಇರುವುದು ಮಲೆನಾಡಿನ ಈಡಿಗ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಸಾಗರ ಕ್ಷೇತ್ರದ ಹರತಾಳು ಹಾಲಪ್ಪ ಹಾಗು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಈಬ್ಬರಲ್ಲಿ ಒಬ್ಬರಿಗಾದ್ರೂ ಸಚಿವ ಸ್ಥಾನ ಸಿಗುತ್ತೆ ಎಂದು ಭಾವಿಸಲಾಗಿತ್ತು. ಆದರೆ ಈಡಿಗ ಸಮುದಾಯದ ಅಡಿಯಲ್ಲಿ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ, ಹಾಗು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಸಚಿವ ಸ್ಥಾನ ಅಲಂಕರಿಸುತ್ತಿರುವುದರಿಂದ ಮಲೆನಾಡಿನ ಶಾಸಕರಿಗೆ ಸ್ಥಾನ ತಪ್ಪಿದಂತಾಗಿದೆ. ಇದು ಮಲೆನಾಡಿನ ಈಡಿಗ ಸಮುದಾಯವನ್ನು ಕೆರಳಿಸಿದೆ. ಹರತಾಳು ಹಾಲಪ್ಪ ಹಾಗು ಕುಮಾರ್ ಬಂಗಾರಪ್ಪ ಇಬ್ಬರೂ ಸಚಿವ ಸ್ಥಾನಕ್ಕೆ ಒತ್ತಡ ಹಾಕಿದ್ದರು. ಇಬ್ಬರಿಗೂ ಮಾಜಿ ಸಿಎಂ ಯಡಿಯೂರಪ್ಪನವರು ಸಚಿವ ಸ್ಥಾನದ ಭರವಸೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ  ಅಂತಿಮವಾಗಿ ಕರಾವಳಿ ಈಡಿಗ ಸಮುದಾಯಕ್ಕೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದ್ದು, ಅಸಮಧಾನಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News