ಕೋವಿಡ್ ಸಾವಿನ ಪ್ರಮಾಣ ಕೇರಳದಲ್ಲಿ ಅಧಿಕ

Update: 2021-08-05 03:54 GMT

ಕೊಚ್ಚಿನ್: ಪ್ರತಿ ಹತ್ತು ಲಕ್ಷ ಜನಸಂಖ್ಯೆಯ ಪೈಕಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಪ್ರಮಾಣ ಕೇರಳದಲ್ಲಿ ಅತ್ಯಧಿಕವಾಗಿದೆ.

ಜುಲೈ 25ರಿಂದ 31ರ ಅವಧಿಯಲ್ಲಿ ಕೇರಳದಲ್ಲಿ ಪ್ರತಿ 10 ಲಕ್ಷ ಮಂದಿಗೆ 24 ಮಂದಿಯಂತೆ ಸೋಂಕಿಗೆ ಬಲಿಯಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಒಡಿಶಾದಲ್ಲಿ ಪ್ರತಿ ವಾರ 10 ಲಕ್ಷ ಮಂದಿಯ ಪೈಕಿ 9 ಮಂದಿ ಸೋಂಕಿನಿಂದ ಸಾಯುತ್ತಿದ್ದಾರೆ. ಭಾರತದಲ್ಲಿ ವಾರಕ್ಕೆ ಸರಾಸರಿ ಕೋವಿಡ್ ಸಾವಿನ ಪ್ರಮಾಣ ಪ್ರತಿ ಲಕ್ಷಕ್ಕೆ ಇಬ್ಬರು.

"ಕೇರಳದಲ್ಲಿ ಸೋಂಕು ಪ್ರಕರಣ ಮತ್ತು ಸಾವಿನ ಅನುಪಾತ ಮೇ 15ರ ವೇಳೆಗೆ ಶೇಕಡ 0.3 ಇದ್ದುದು ಇದೀಗ ಶೇಕಡ 0.49ಕ್ಕೆ ಹೆಚ್ಚಿದೆ. ಆದಾಗ್ಯೂ ಕೇರಳದಲ್ಲಿ ಒಟ್ಟಾರೆ ಸಿಎಫ್‌ಆರ್ ಪ್ರಮಾಣ ದೇಶದಲ್ಲೇ ಕನಿಷ್ಠ" ಎಂದು ಕೋವಿಡ್ ಅಂಕಿ ಅಂಶಗಳನ್ನು ವಿಶ್ಲೇಷಿಸುತ್ತಾ ಬಂದಿರುವ ಸಾರ್ವಜನಿಕ ಆರೋಗ್ಯ ತಜ್ಞ ಡಾ.ಪದ್ಮನಾಭ ಶಣೈ ಹೇಳುತ್ತಾರೆ.

ದೇಶದಲ್ಲಿ ಸೋಮವಾರ 420 ಕೋವಿಡ್ ಸಾವು ಸಂಭವಿಸಿದ್ದರೆ ಈ ಪೈಕಿ ಶೇಕಡ 28ರಷ್ಟು ಅಂದರೆ 118 ಸಾವು ಕೇರಳದಲ್ಲಿ ಸಂಭವಿಸಿದೆ. ಆದರೆ ಮಂಗಳವಾರ ದೈನಿಕ ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ (177) ಮತ್ತೆ ಕೇರಳ (148)ವನ್ನು ಹಿಂದಿಕ್ಕಿದೆ.

ಕೇರಳದಲ್ಲಿ ಸಾವಿನ ದರ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರ. ಸಾವಿನ ದರ ಎರಡನೇ ಅಲೆಯಲ್ಲಿ ಮೊದಲನೇ ಅಲೆಗಿಂತ ಅಧಿಕ ಇದೆ ಎಂದು ಆರೋಗ್ಯ ಅರ್ಥಶಾಸ್ತ್ರಜ್ಞ ರಿನೊ ಎಂ.ಜಾನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News