ನೂತನ ಸಚಿವರಿಗೆ ಖಾತೆ ಹಂಚಿಕೆಗೂ ಮೊದಲೇ ಕೊಠಡಿ ಹಂಚಿಕೆ

Update: 2021-08-05 12:53 GMT

ಬೆಂಗಳೂರು, ಆ. 5: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಪ್ರವಾಹ ಮತ್ತು ಕೋವಿಡ್ ಪರಿಸ್ಥಿತಿ ಪರಿಶೀಲನೆಗೆ ಸಚಿವರಿಗೆ ತಾತ್ಕಾಲಿಕವಾಗಿ ಜಿಲ್ಲೆಗಳ ಜವಾಬ್ದಾರಿ ಹಂಚಿಕೆ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದೀಗ ಖಾತೆ ಹಂಚಿಕೆಗೆ ಮೊದಲೇ ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಗೋವಿಂದ ಕಾರಜೋಳ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ-340/341, ಕೆ.ಎಸ್.ಈಶ್ವರಪ್ಪ- 314/314 ಎ, ಆರ್.ಅಶೋಕ್-317/317-ಎ, ಬಿ.ಶ್ರೀರಾಮುಲು-328, ವಿ.ಸೋಮಣ್ಣ-327/327 ಎ, ಉಮೇಶ್ ಕತ್ತಿ-329, ಎಸ್. ಅಂಗಾರ-305, ಜೆ.ಸಿ.ಮಾಧುಸ್ವಾಮಿ-316, ಕೋಟಶ್ರೀನಿವಾಸ ಪೂಜಾರಿ- 343/343-ಎ, ಮುರುಗೇಶ್ ನಿರಾಣಿ-315/315 ಎ, ಬಿ.ಎ.ಬಸವರಾಜು-337/337 ಎ. ಡಾ.ಕೆ.ಸುಧಾಕರ್-339/339 ಎ, ಕೆ.ಗೋಪಾಲಯ್ಯ-244/245, ಎಂಟಿಬಿ ನಾಗರಾಜ್-330/330 ಎ, ನಾರಾಯಣಗೌಡ-301/301 ಎ, ಬಿ.ಸಿ.ನಾಗೇಶ್-262/262 ಎ, ಸುನೀಲ್ ಕುಮಾರ್-344/344 ಎ, ಹಾಲಪ್ಪ ಆಚಾರ್- ವಿಧಾನಸೌಧ 225/225 ಎ ಕೊಠಡಿಯನ್ನು ಹಂಚಿಕೆ ಮಾಡಲಾಗಿದೆ.

ಅರಗ ಜ್ಞಾನೇಂದ್ರ-ವಿಕಾಸಸೌಧದಲ್ಲಿನ 38/39, ಡಾ.ಅಶ್ವತ್ಥ ನಾರಾಯಣ- ವಿಕಾಸಸೌಧ 242/243, ಸಿ.ಸಿ.ಪಾಟೀಲ್-244/ 245, ಆನಂದ್ ಸಿಂಗ್-36/37, ಪ್ರಭು ಚೌಹಾಣ್-442/443 ಎ, ಶಿವರಾಮ್ ಹೆಬ್ಬಾರ್-ವಿಕಾಸಸೌಧ 206/207, ಎಸ್.ಟಿ.ಸೋಮಶೇಖರ್-ವಿಕಾಸಸೌಧ 143/146, ಶಶಿಕಲಾ ಜೊಲ್ಲೆ-141/142, ಶಂಕರ್ ಪಾಟೀಲ್-ವಿಕಾಸಸೌಧ 342/343, ಮುನಿರತ್ನ-344/345 ಕೊಠಡಿ ಸಂಖ್ಯೆಯನ್ನು ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಕೆ.ರವೀಂದ್ರ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News