ಬೆಂಗಳೂರು: ಮಗು ಎಸೆದು ಪರಾರಿಯಾಗಿದ್ದ ಅವಿವಾಹಿತೆ ವಶಕ್ಕೆ

Update: 2021-08-05 13:34 GMT

ಬೆಂಗಳೂರು, ಆ.5: ತನ್ನ ನವಜಾತ ಶಿಶು ಅನ್ನು ಎಸೆದು ಪರಾರಿಯಾಗಿದ್ದ ಅವಿವಾಹಿತ ಮಹಿಳೆಯನ್ನು ಸೋಲದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಹೆಸರಘಟ್ಟದ ಖಾಸಗಿ ಕ್ಲಿನಿಕ್‍ಗೆ ಚಿಕಿತ್ಸೆಗೆ ಬಂದಿದ್ದ ಅವಿವಾಹಿತೆಗೆ ಅವಧಿಗೂ ಮುನ್ನವೇ ಮಗು ಜನನವಾಗಿದ್ದು, ಬಳಿಕ ಶಿಶುವನ್ನು ಕಿಟಕಿಯಿಂದ ಎಸೆದು ಪರಾರಿಯಾಗಲು ಯತ್ನಿಸಿದ್ದರು. ಈ ಸಂಬಂಧ ಕ್ಲಿನಿಕ್ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳೀಯರ ಮಾಹಿತಿ ಮೇರೆಗೆ 22 ವಯಸ್ಸಿನ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಯುವತಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಹೇಳಿಕೆ ಆಧಾರದ ಮೇಲೆ ಆಕೆಯ ಪ್ರೇಮಿ ಗುಡೇಮಾರನಹಳ್ಳಿಯ ಶಶಾಂಕ್(25)ನನ್ನು  ಸೋಲದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News