"ಮಿಸ್ಟರ್‌ ಮೋದಿ...ನಾವು ಹೇಳುವುದನ್ನು ಕೇಳಿ": ವೀಡಿಯೊ ಬಿಡುಗಡೆ ಮಾಡಿದ ಪ್ರತಿಪಕ್ಷಗಳು

Update: 2021-08-08 13:45 GMT

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇವಲ ಒಂದು ವಾರದ ಕಲಾಪಗಳು ಬಾಕಿಯಿರುವಾಗ, ಪ್ರತಿಪಕ್ಷ ನಾಯಕರು ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. "ಜುಲೈ 19 ರಂದು ಅಧಿವೇಶನ ಆರಂಭವಾದಾಗಿನಿಂದ ನಾವು ನಮ್ಮ ಬೇಡಿಕೆಯನ್ನು ಪ್ರಸ್ತಾಪಿಸಲು ಪ್ರಾರಂಭಿಸಿದ್ದೇವೆ" ಎಂದು ವೀಡಿಯೊದಲ್ಲಿ ತಿಳಿಸಲಾಗಿದೆ. 26 ದಿನಗಳ ಸುದೀರ್ಘ ಮುಂಗಾರು ಅಧಿವೇಶನ ಸಂಸತ್ತು ಆಗಸ್ಟ್ 13 ರಂದು ಕೊನೆಗೊಳ್ಳುತ್ತದೆ.

ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್ ಮತ್ತು ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ವಿಡಿಯೊವನ್ನು ಹಂಚಿಕೊಂಡಿದ್ದು, ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಮಾತುಗಳನ್ನು ಕೇಳುತ್ತಿಲ್ಲ ಮತ್ತು ಸಂಸತ್ತಿನಲ್ಲಿ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂದು ಆರೋಪಿಸಿದರು. 10 ವಿರೋಧ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ಮಾಡಿದ ಭಾಷಣದ ತುಣುಕುಗಳನ್ನು ವೀಡಿಯೊ ಒಳಗೊಂಡಿದೆ.

"ಶ್ರೀ (ನರೇಂದ್ರ) ಮೋದಿ, ನಮ್ಮ ಮಾತನ್ನು ಕೇಳಲು ಬನ್ನಿ" ಎಂದು ಒ'ಬ್ರೇನ್ ಟ್ವೀಟ್ ಮಾಡಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನವು ಕಳೆದ ಕೆಲವು ವಾರಗಳಿಂದ ಹಲವಾರು ಅಡೆತಡೆಗಳನ್ನು ಕಂಡಿದ್ದು, ಪೆಗಾಸಸ್ ಸ್ಪೈವೇರ್ ಅನ್ನು ಭಾರತದ ಹಲವಾರು ರಾಜಕಾರಣಿಗಳು, ಪತ್ರಕರ್ತರು ಮತ್ತು ಕಾರ್ಯಕರ್ತರ ಮೇಲೆ ಕಣ್ಣಿಡಲು ಬಳಸಲಾಗುತ್ತಿತ್ತು ಎಂಬ ಆರೋಪದ ಮೇಲೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಚರ್ಚೆಗಳು ಬಿಕ್ಕಟ್ಟಿನ ವಾತಾವರಣ ಉಂಟು ಮಾಡಿತ್ತು. 

ಕಣ್ಗಾವಲು ಆರೋಪದ ಮೇಲೆ ಚರ್ಚೆಗಳನ್ನು ನಡೆಸಲು ಸರ್ಕಾರ ನಿರಾಕರಿಸಿದೆ, ಆದರೆ ಪ್ರತಿಪಕ್ಷಗಳು ಪದೇ ಪದೇ ಈ ವಿಷಯದ ಬಗ್ಗೆ ಚರ್ಚಿಸಲು ಒತ್ತಾಯಿಸುತ್ತಿವೆ.

"ಕಳೆದ 14 ದಿನಗಳಿಂದ ನಾವು ಕೇಳುತ್ತಿರುವ ಚರ್ಚೆಗೆ ನೀವು ಅವಕಾಶ ನೀಡುತ್ತಿಲ್ಲ ಮತ್ತು ನೀವು ಬಳಿಕ ಚರ್ಚಿಸಬಹುದಾದ ಮಸೂದೆಯನ್ನು ಅಂಗೀಕರಿಸುತ್ತಿದ್ದೀರಿ. ನಿಮಗೆ ಧೈರ್ಯವಿದ್ದರೆ, ಈಗ ಪೆಗಾಸಸ್‌ ಕುರಿತು ಚರ್ಚೆಗಳನ್ನು ಪ್ರಾರಂಭಿಸಿ" ಎಂದು ಖರ್ಗೆ ವಿಡಿಯೋದಲ್ಲಿ ಹೇಳಿದ್ದಾರೆ.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ವಂದನಾ ಚವ್ಹಾಣ್ ಮತ್ತು ರಾಷ್ಟ್ರೀಯ ಜನತಾದಳದ ಮನೋಜ್ ಝಾ ಅವರು ವಿಡಿಯೋದಲ್ಲಿ ಪೆಗಾಸಸ್ ಸ್ಪೈವೇರ್ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.

ಸದನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ ಎಂದು ತೃಣಮೂಲ ಕಾಂಗ್ರೆಸ್‌ನ ಸುಖೇಂದು ಶೇಖರ್ ರಾಯ್ ಹೇಳಿದರೆ, ದ್ರಾವಿಡ ಮುನ್ನೇಟ್ರ ಕಳಗಂ ಸಂಸದೆ ಆರ್‌ಎಸ್ ಭಾರತಿ ಸಂಸತ್ತಿನಲ್ಲಿ "ಪ್ರಜಾಪ್ರಭುತ್ವದ ಗುಣಮಟ್ಟ" ಕುರಿತು ಚರ್ಚೆಗೆ ಒತ್ತಾಯಿಸಿದರು.

"ಇದು ರೈತರ ಬಗ್ಗೆಯಾಗಲಿ, ಮಹಿಳೆಯರ ಆರ್ಥಿಕತೆ, ಸುರಕ್ಷತೆ ಮತ್ತು ಭದ್ರತೆಯ ಬಗ್ಗೆಯಾಗಲಿ ... ವಿರೋಧ ಪಕ್ಷದವರು ಹೇಳಿದ ಮಾತುಗಳು ಅವರನ್ನು ಮೌನವಾಗಿಸುತ್ತದೆ, ಸಂಸತ್ತನ್ನು ಮುಂದೂಡುವಂತೆ ಮಾಡುತ್ತದೆ, ನಮ್ಮ ಮೈಕ್ರೊಫೋನ್ ಅನ್ನು ಮ್ಯೂಟ್ ಮಾಡಲಾಗುತ್ತದೆ" ಎಂದು ಶಿವಸೇನೆಯ ಪ್ರಿಯಾಂಕ ಚತುರ್ವೇದಿ ಹೇಳಿದರು.

ತೆಲಂಗಾಣ ರಾಷ್ಟ್ರ ಸಮಿತಿ, ಆಮ್ ಆದ್ಮಿ ಪಾರ್ಟಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ನಾಯಕರ ಭಾಷಣಗಳ ತುಣುಕುಗಳನ್ನೂ ವೀಡಿಯೋದಲ್ಲಿ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News