ಸಿನೆಮಾ ಚಿತ್ರೀಕರಣ ವೇಳೆ ಫೈಟರ್ ಸಾವು ಪ್ರಕರಣ: ನಿರ್ದೇಶಕ ಸೇರಿ ಹಲವರು ವಶಕ್ಕೆ

Update: 2021-08-10 12:33 GMT
 ಫೈಟರ್ ವಿವೇಕ್

ಬೆಂಗಳೂರು, ಆ.10: ನಗರದ ಹೊರವಲಯದ ಜೋಗರದೊಡ್ಡಿಯಲ್ಲಿ `ರಚ್ಚು ಐ ಲವ್ ಯೂ’ ಸಿನಿಮಾ ಚಿತ್ರೀಕರಣದ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಮೃತಪಟ್ಟ ಆರೋಪ ಪ್ರಕರಣ ಸಂಬಂಧ ಹಲವರನ್ನು ಇಲ್ಲಿನ ಬಿಡದಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿನೆಮಾ ಸಾಹಸ ನಿರ್ದೇಶಕ ವಿನೋದ್, ಸಹ ನಿರ್ದೇಶಕ ಶಂಕರರಾಜ್, ಜಮೀನು ಮಾಲಕ ಪುಟ್ಟರಾಜು, ಕ್ರೇನ್ ಚಾಲಕ ಮುನಿಯಪ್ಪ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಮನಗರದ ಹೆಚ್ಚುವರಿ ಸಿವಿಲ್ ಕೋರ್ಟ್ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಲಾಗಿದ್ದು ಆರೋಪಿಗಳನ್ನು ಆ.24ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು, ನಾಪತ್ತೆಯಾಗಿರುವ ನಿರ್ಮಾಪಕ ಗುರುದೇಶಪಾಂಡೆಗಾಗಿ ಶೋಧ ಮುಂದುವರಿದಿದೆ. ಈ ಮಧ್ಯೆ ಚಿತ್ರೀಕರಣ ನಡೆಸಲು ಪೊಲೀಸರ ಅನುಮತಿ ಪಡೆದಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ಘಟನೆಯಲ್ಲಿ ಕಲಾವಿದ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News