ಲೋಕಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ, ಮುಂಗಾರು ಅಧಿವೇಶನಕ್ಕೆ ತೆರೆ

Update: 2021-08-11 07:21 GMT

ಹೊಸದಿಲ್ಲಿ: ಲೋಕಸಭೆ ಕಲಾಪವನ್ನು ಇಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು ಪ್ರತಿಪಕ್ಷಗಳ ಗದ್ದಲದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನ ಕೊನೆಗೊಂಡಿದೆ.

ಜುಲೈ 19 ರಂದು ಅಧಿವೇಶನ ಆರಂಭವಾದಾಗಿನಿಂದ ಪೆಗಾಸಸ್ ಗೂಢಚರ್ಯೆ ಪ್ರಕರಣ, ವಿವಾದಾತ್ಮಕ ಕೃಷಿ ಕಾನೂನುಗಳು ಹಾಗೂ  ಇತರ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ನಿರಂತರವಾಗಿ ಪ್ರತಿಭಟನೆಯಲ್ಲಿ ನಿರಂತರವಾಗಿದ್ದ ಕಾರಣ ಕಲಾಪಗಳು ಸುಸೂತ್ರವಾಗಿ ನಡೆದಿಲ್ಲ.

ಪ್ರಶ್ನೋತ್ತರ ಸಮಯವು ಈ ಅಧಿವೇಶನದ ಹೆಚ್ಚಿನ ದಿನಗಳಲ್ಲಿ ಅಡೆತಡೆಗಳನ್ನು ಕಂಡಿತು. ಆದರೆ ಲೋಕಸಭೆಯು ಸಂವಿಧಾನದ ತಿದ್ದುಪಡಿ ಮಸೂದೆಯನ್ನು ಒಳಗೊಂಡಂತೆ ಹಲವಾರು ಮಸೂದೆಗಳನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಯಿತು. ಸಂವಿಧಾನದ ತಿದ್ದುಪಡಿ ಮಸೂದೆಯು ರಾಜ್ಯಗಳಿಗೆ ತಮ್ಮ ಒಬಿಸಿ ಪಟ್ಟಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.

ಸ್ಪೀಕರ್ ಇಂದು ಸದನವನ್ನು ಮುಂದೂಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಹಾಜರಿದ್ದರು.

ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮೊದಲು, ಸದನವು ಇತ್ತೀಚೆಗೆ ನಿಧನರಾದ ನಾಲ್ಕು ಮಾಜಿ ಸದಸ್ಯರಿಗೆ ಗೌರವವನ್ನು ಸಲ್ಲಿಸಿತು. ಅಗಲಿದ ಮಾಜಿ ಸದಸ್ಯರಿಗೆ ಗೌರವ ಸೂಚಕವಾಗಿ ಸದನದಲ್ಲಿ ಹಾಜರಿದ್ದ ಸದಸ್ಯರು ಸ್ವಲ್ಪ ಹೊತ್ತು ಮೌನವಾಗಿ ನಿಂತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News