ಬದುಕಿದ್ದರೆ ಇದೇ ಅವಧಿಯೊಳಗೆ ನಾನು ಸಿಎಂ ಆಗುತ್ತೇನೆ: ಸಚಿವ ಉಮೇಶ್ ಕತ್ತಿ

Update: 2021-08-15 11:23 GMT

ಇದೇ ಅವಧಿಯೊಳಗೆ ನಾನೂ ಮುಖ್ಯಮಂತ್ರಿ: ಸಚಿವ ಉಮೇಶ್ ಕತ್ತಿ

ಬಾಗಲಕೋಟೆ, ಆ. 15: ಮುಂದಿನಗಳಲ್ಲಿ ಇದೇ ಅವಧಿಯೊಳಗೆ ನಾನು ಮುಖ್ಯಮಂತ್ರಿ ಆದರೂ ಆಗಬಹುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ನುಡಿದರು.

ರವಿವಾರ ನಗರದ ಕ್ರೀಡಾಂಗಣದಲ್ಲಿ 75ನೆ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದುಕಿದ್ದರೆ ಇದೇ ಅವಧಿಗೆ ಮುಖ್ಯಮಂತ್ರಿ ಆಗುವೆ. ಆದರೆ, ಒಂದು ವೇಳೆ ಸಾವು ಬಂದರೆ ಯಾರು ಏನು ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಬೆಳಗಾವಿ ಜಿಲ್ಲೆಯ ಉಸ್ತುವಾರಿ ಆಗುವ ಆಸೆ ಇದೆ. ಆದರೆ ಆಯಾ ಜಿಲ್ಲೆಯವರೇ ಉಸ್ತುವಾರಿ ಆಗಬಾರದು ಎಂಬುದು ಪಕ್ಷದ ನಿರ್ಧಾರವಾಗಿದೆ.ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯವರೇ ಆದಲ್ಲಿ ಒಳ್ಳೆಯದು. ಅಭಿವೃದ್ಧಿಗೆ ಅನುಕೂಲ ಎಂದು ನುಡಿದರು.
ಇನ್ನು, ಲೋಕೋಪಯೋಗಿ ಇಲಾಖೆಯಿಂದ ಒಟ್ಟು 402.62 ಕೋಟಿ ರೂ.ವೆಚ್ಚದಲ್ಲಿ 376.22 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಕೋವಿಡ್ ಲಸಿಕೆ ನೀಡುವ ಜೊತೆಗೆ ರೋಗವನ್ನು ಹತೋಟಿಗೆ ತರಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಮೇಶ್ ಕತ್ತಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News