'ಸುಡೊಕು ಪಿತಾಮಹ' ಜಪಾನ್‌ನ ಮಕಿ ಕಾಜಿ ನಿಧನ

Update: 2021-08-18 13:46 GMT
ಮಕಿ ಕಾಜಿ (Photo: Twitter/@mymixtapez)

ಟೋಕಿಯೊ: 'ಸುಡೊಕು ಪಿತಾಮಹ' ಎಂದು ಕರೆಯಲಾಗುತ್ತಿದ್ದ ಜಪಾನ್ ನ ಮಕಿ ಕಾಜಿ(69 ವರ್ಷ) ಕ್ಯಾನ್ಸರ್ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ ಲಕ್ಷಾಂತರ ಜನರಿಂದ ಸುಡೊಕೊ ಮೆಚ್ಚುಗೆ ಪಡೆದಿದೆ. ಸಂಖ್ಯಾ ಆಧಾರಿತ ಸುಡುಕೊ ಜನಪ್ರಿಯಗೊಳಿಸುವಲ್ಲಿ ಕಾಜಿ ಮಹತ್ವದ ಪಾತ್ರವಹಿಸಿದ್ದರು.

ಆಗಸ್ಟ್ 10ರಂದೇ ತನ್ನ 69 ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದಾಗಿ ಕಾಜಿ ನಿಧನರಾಗಿದ್ದಾರೆ ಎಂದು ಜಪಾನಿನ ಪ್ರಕಾಶಕ ನಿಕೊಲಿ ಘೋಷಿಸಿದ್ದಾರೆ.

ಕಾಜಿಯವರನ್ನು ಸುಡೊಕು ಪಿತಾಮಹ ಎಂದು  ಕರೆಯಲಾಗುತ್ತಿತ್ತು ಮತ್ತು ಪ್ರಪಂಚದಾದ್ಯಂತದ ಒಗಟು ಅಭಿಮಾನಿಗಳು ಅವರನ್ನು ಪ್ರೀತಿಸುತ್ತಿದ್ದರು ಎಂದು ಪ್ರಕಾಶಕರು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News