ಮೋದಿ ಹೆಸರಿಟ್ಟು 50 ರೂ.ಗೆ ಪೆಟ್ರೋಲ್ ನೀಡಲಿ: ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ

Update: 2021-08-18 17:05 GMT

ಮೈಸೂರು,ಆ.18: ಪೆಟ್ರೋಲ್ ಬಂಕ್ ಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಟ್ಟು 50ರೂ.ಗಳಿಗೆ ಪೆಟ್ರೋಲ್ ನೀಡಲಿ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಕಾಂಗ್ರೆಸ್ ಪಕ್ಷವು ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಬಡವರಿಗೆ 10 ರೂಪಾಯಿಗೆ ಊಟ 5 ರೂಪಾಯಿಗೆ ಉಪಹಾರ ನೀಡುವುದು. ಬಿಜೆಪಿ  ನಾಯಕರಿಗೆ ಇಷ್ಟವಿಲ್ಲವೆಂದಾದರೆ, ಇವರು ಅವರ ನಾಯಕ ಹಾಗೂ ಸದಾ  ಸುಳ್ಳನ್ನೇ ಆಡುವ ನರೇಂದ್ರ ಮೋದಿ  ಅವರ ಹೆಸರನ್ನೇ ಎಲ್ಲಾ ಪೆಟ್ರೋಲ್ ಬಂಕ್ ಗಳಿಗೆ ಇಟ್ಟುಕೊಂಡು ಬಡವರಿಗೆ 50 ರೂಪಾಯಿಗೆ ಪೆಟ್ರೋಲ್ ವಿತರಿಸಲಿ ಎಂದು ಕಿಡಿ ಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News