ಜಾತಿ ಗಣತಿಗೆ ಆಗ್ರಹಿಸಿ ಪ್ರಧಾನಿ ಭೇಟಿಯಾಗಲಿರುವ ಬಿಹಾರ ನಿಯೋಗದಲ್ಲಿ ಸಿಎಂ ನಿತೀಶ್ ಜತೆಗೂಡಲಿರುವ ತೇಜಸ್ವಿ

Update: 2021-08-20 08:51 GMT

ಪಾಟ್ನಾ: ಜಾತಿ ಆಧರಿತ ಜನಗಣತಿ ನಡೆಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು ಆಗಸ್ಟ್ 23ರಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲಿರುವ ಬಿಹಾರದ ಸರ್ವಪಕ್ಷ ನಿಯೋಗದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ವಿಪಕ್ಷ ನಾಯಕ ಆರ್‍ಜೆಡಿಯ ತೇಜಸ್ವಿ ಪ್ರಸಾದ್ ಯಾದವ್ ಅವರೂ ಇರಲಿದ್ದಾರೆ. ನಿತೀಶ್ ಮತ್ತು ತೇಜಸ್ವಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ನಿಯೋಗದಲ್ಲಿ ತೇಜಸ್ವಿ ಅವರು ಕೂಡ ಇರಲಿದ್ದಾರೆಂಬುದನ್ನು ಅವರ ರಾಜಕೀಯ ಸಲಹೆಗಾರ ಸಂಜಯ್ ಯಾದವ್ ದೃಢೀಕರಿಸಿದ್ದಾರೆ.

2021ರ ಜನಗಣತಿಯಲ್ಲಿ ಜಾತಿ ಗಣತಿಯೂ ನಡೆಯಬೇಕೆಂದು ಬಿಜೆಪಿ ಹೊರತುಪಡಿಸಿ ಬಿಹಾರದ ಎಲ್ಲಾ ರಾಜಕೀಯ ಪಕ್ಷಗಳು ಆಗ್ರಹಿಸಿವೆ. ಕೇಂದ್ರ ಸರಕಾರ ಇಲ್ಲಿಯ ತನಕ ಈ ಬೇಡಿಕೆಯನ್ನು ತಿರಸ್ಕರಿಸಿದ್ದರೂ ಬಿಹಾರದ ಉಪಮುಖ್ಯಮಂತ್ರಿ ರೇಣು ದೇವಿ ಸಹಿತ ಕೆಲ ಬಿಜೆಪಿ ನಾಯಕರು ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News