ಕುಸಿದುಬಿದ್ದ ʼನಮೋʼ ಕಾಲೇಜ್ ಮೇಲ್ಛಾವಣಿ: "ಮುಂಬರುವ ದಿನಗಳ ಚಿತ್ರಣವೇ?" ಎಂದು ಪ್ರಶ್ನಿಸಿದ ಮಾಜಿ ಐಎಎಸ್‌ ಅಧಿಕಾರಿ

Update: 2021-08-20 11:58 GMT
Photo: bhaskar.com

ವಡೋದರ: ಗುಜರಾತ್‌ ನ ಕೇಂದ್ರಾಡಳಿತ ಪ್ರದೇಶವಾದ ದಾನಾದಲ್ಲಿನ ಸಿಲ್ವಾಸಾ ಎಂಬ ಪ್ರದೇಶದಲ್ಲಿ ೧೩೯ಕೋಟಿ ರೂ. ಖರ್ಚಿನಲ್ಲಿ ನಮೋ ವೈದ್ಯಕೀಯ ಕಾಲೇಜ್‌ ಅನ್ನು ನಿರ್ಮಿಸಲಾಗುತ್ತಿದೆ. ಇದೀಗ ನಿರ್ಮಾಣ ಹಂತದಲ್ಲೇ ಈ ಕಟ್ಟಡದ ಮೇಲ್ಛಾವಣಿಯು ಕುಸಿದು ಬಿದ್ದಿದೆ. ದೈನಿಕ್‌ ಭಾಸ್ಕರ್‌ ಈ ಕುರಿತು ವರದಿ ಪ್ರಕಟಿಸಿದ್ದು, ಜೊತೆಗೆ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥ್‌  ಕುರಿತು ಟ್ವೀಟ್‌ ಮಾಡಿದ್ದಾರೆ.

ಘಟನೆಯು ಗುರುವಾರದಂದು ನಡೆದಿದ್ದು, ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ದೈನಿಕ್‌ ಭಾಸ್ಕರ್‌ ವರದಿ ಮಾಡಿದೆ. ಆದರೆ ಇತರ ಯಾವುದೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ವರದಿ ಪ್ರಕಟವಾಗಿಲ್ಲ. 

ಆದರೆ ಘಟನೆ ಕುರಿತು ಟ್ವೀಟ್‌ ಮಾಡಿದ ಕಣ್ಣನ್‌ ಗೋಪಿನಾಥ್‌, ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ, ಸಿಲ್ವಾಸಾದಿಂದ ದುಃಖಕರ ಸುದ್ದಿಯೊಂದು ಕೇಳಿ ಬಂದಿದೆ. ನಿರ್ಮಾಣ ಹಂತದಲ್ಲಿರುವ ನಮೋ ಮೆಡಿಕಲ್‌ ಕಾಲೇಜ್‌ ನ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದು ಮುಂಬರುವ ದಿನಗಳ ಲಕ್ಷಣವೇ? ಅಥವಾ ಇದು ನಿಮ್ಮ ಬ್ರಾಂಡ್‌ ಅನ್ನು ಸೂಚಿಸುವ ಕಳಪೆ ಗುಣಮಟ್ಟದ ವಸ್ತುಗಳಿಂದ ಮಾಡಲ್ಪಟ್ಟಿದೆಯೇ? " ಎಂದು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News