ನ್ಯಾಯಾಂಗ ನಿಂದನೆಯ ನಿಬಂಧನೆಗಳನ್ನು ಜನರ ಹಿತಾಸಕ್ತಿ ರಕ್ಷಿಸಲು ಮಾತ್ರ ಬಳಸಬೇಕು ಎಂದ ಬಾಂಬೆ ಹೈಕೋರ್ಟ್

Update: 2021-08-23 09:14 GMT

ಹೊಸದಿಲ್ಲಿ: ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ನಿಬಂಧನೆಗಳನ್ನು ಜನರ ಹಕ್ಕುಗಳನ್ನು ರಕ್ಷಿಸಲು ಹಾಗೂ ನ್ಯಾಯದಾನ ವ್ಯವಸ್ಥೆ ಅಬಾಧಿತವಾಗಿರಲು ಬಳಸಬೇಕೇ ಹೊರತು ನ್ಯಾಯಾಲಯಗಳನ್ನು  ನಿಂದನೆಯಿಂದ ರಕ್ಷಿಸಲು  ಬಳಸಬಾರದು ಎಂದು  ಬಾಂಬೆ ಹೈಕೋರ್ಟ್ ಹೇಳಿದೆ.

ವಾಟ್ಸ್ಯಾಪ್ ಮತ್ತು ಯೂಟ್ಯೂಬ್‍ನಲ್ಲಿ ನಿಂದನಾತ್ಮಕ ವೀಡಿಯೋಗಳನ್ನು ಅಪ್ಲೋಡ್ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ಕ್ರಮ ಕೈಗೊಳ್ಳಲು  ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂ ಎಸ್ ಸೋನಕ್ ಅವರ ಪೀಠ ನಿರಾಕರಿಸಿದೆ.

"ನ್ಯಾಯದಾನ ಪ್ರಕ್ರಿಯೆಯಲ್ಲಿ ಸಮುದಾಯದ ಹಿತಾಸಕ್ತಿ ರಕ್ಷಿಸುವ  ಕರ್ತವ್ಯ ನ್ಯಾಯಾಲಯಕ್ಕಿದೆ, ಇದೇ ಕಾರಣಕ್ಕಾಗಿ ನ್ಯಾಯಾಂಗ ನಿಂದನೆಗೆ ಶಿಕ್ಷಿಸುವ ಅಧಿಕಾರವನ್ನು ಅದಕ್ಕೆ ನೀಡಲಾಗಿದೆ. ಆದರೆ ಈ ಅಧಿಕಾರವನ್ನು ನ್ಯಾಯಾಲಯದ ಅವಮಾನದ ಸಮದರ್ಭದಲ್ಲಿ ಅದರ ಘನತೆ ರಕ್ಷಿಸಲು ಬಳಸುವಂತಿಲ್ಲ ಬದಲು ಜನರ ಹಕ್ಕುಗಳು ಬಾಧಿತವಾಗದಂತೆ ರಕ್ಷಿಸುವ ಉದ್ದೇಶದಿಂದ ಬಳಸಬೇಕಿದೆ" ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ದೂರುದಾರ ಕಾಶಿನಾಥ್ ಶೆಟ್ಯೆ ಎಂಬವರಿಗೆ ಈ ಹಿಂದೆ ಅಡ್ವಕೇಟ್ ಜನರಲ್ ಅವರು ಡೇವಿಡ್ ಕ್ಲೆವರ್ ಎಂಬವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿಸಿದ್ದರು.

"ಈ ಪ್ರಕರಣವನ್ನು ಮುಂದುವರಿಸಿದರೆ ವೀಡಿಯೋ ಅಪ್‍ಲೋಡ್ ಮಾಡಿದವರ ಪ್ರಚಾರಪ್ರಿಯತೆಗೆ ಇನ್ನಷ್ಟು ಇಂಬು ನೀಡುತ್ತದೆಯೇ ಹೊರತು  ಗೋವಾದಲ್ಲಿ ನ್ಯಾಯದಾನ ಕುರಿತಾದ ನಿಜವಾದ ಕಾಳಜಿಯ ಕುರಿತು ಗಮನ ಹರಿಸಿದಂತಾಗುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News