ಬ್ರಿಟಿಷರಿಗೆ‌ ʼಕ್ಷಮಾಪಣಾ ಪತ್ರʼ ಬರೆದ ಕ್ರಾಂತಿಕಾರಿ ನಾಯಕ ಯಾರು?: ಪ.ಬಂಗಾಳ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪ್ರಶ್ನೆ

Update: 2021-08-23 11:16 GMT

ಕೋಲ್ಕತ್ತ: ಅಂಡಮಾನ್‌ ನ ಜೈಲಿನಲ್ಲಿರುವಂತಹ ಸಂದರ್ಭದಲ್ಲಿ ತನ್ನನ್ನು ಶಿಕ್ಷೆಯಿಂದ ಮುಕ್ತಿಗೊಳಿಸಬೇಕು ಎಂದು ವಿನಾಯಕ ದಾಮೋದರ ಸಾವರ್ಕರ್‌ ಬ್ರಿಟಿಷ್‌ ಅಧಿಕಾರಿಗೆ ಪತ್ರ ಬರೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಗಾಂಧೀಜಿಯ ಹತ್ಯೆಗೆ ಪಿತೂರಿ ನಡೆಸಿದ ಪ್ರಕರಣದಲ್ಲೂ ಅವರ ಹೆಸರು ಕೇಳಿ ಬಂದಿದ್ದು, ಬಳಿಕ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿತ್ತು. ಆದರೆ ಸದ್ಯ ಅವರನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸಲಾಗುತ್ತಿರುವ ಕುರಿತು ಸಾಮಾಜಿಕ ತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಈ ನಡುವೆ ಪಶ್ಚಿಮ ಬಂಗಾಳದ ನಾಗರಿಕ ಸೇವಾ ಪರೀಕ್ಷೆಯಲ್ಲಿನ ಪ್ರಶ್ನೆಯೊಂದು ನೆಟ್ಟಿಗರ ಗಮನ ಸೆಳೆದಿದೆ.

ಪಶ್ಚಿಮ ಬಂಗಾಳದ ನಾಗರಿಕ ಸೇವಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ನಾಲ್ಕು ಉತ್ತರಗಳ ಆಯ್ಕೆ ಪ್ರಶ್ನೆಯಲ್ಲಿ "ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದ ಕ್ರಾಂತಿಕಾರಿ ನಾಯಕ ಯಾರು? ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಅದರಲ್ಲಿ ವಿನಾಯಕ ದಾಮೋದರ ಸಾವರ್ಕರ್‌, ಬಾಲ ಗಂಗಾಧರ ತಿಲಕ್, ಸುಖ್‌ ದೇವ್‌ ಥಾಪರ್‌ ಹಾಗೂ ಚಂದ್ರ ಶೇಖರ ಆಝಾದ್‌ ರ ಹೆಸರುಗಳನ್ನು ಆಯ್ಕೆಯಾಗಿ ನೀಡಲಾಗಿದೆ. "ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳ ಶಿಕ್ಷಣ ಇಲಾಖೆ ನಿಜಕ್ಕೂ ಉತ್ತಮವಾದ ಮತ್ತು ಸರಿಯಾದ ಪ್ರಶ್ನೆಯನ್ನೇ ಕೇಳಿದ್ದಾರೆ" ಎಂದು ಟ್ವಿಟರ್‌ ನಲ್ಲಿ ಬಳಕೆದಾರರೋರ್ವರು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News